ಮುಂಬೈ: ಕಾಸರಗೋಡು ತಳಂಗರೆ ನಿವಾಸಿ ಕೇರಳ ಮುಸ್ಲಿಂ ಜಮಾಯತ್ ಬಾಂದ್ರ ಬ್ರಾಂಚ್ ಮಾಜಿ ಅಧ್ಯಕ್ಷ, ಜಮಾಯತ್ ಸಕ್ರಿಯ ಕಾರ್ಯಕರ್ತನಾಗಿದ್ದ ಅಬ್ದುಲ್ಲ ಮಲಬಾರಿ (70) ಕುವೈತ್ನಲ್ಲಿ ನಿಧನ ಹೊಂದಿದರು. ಮುಂಬೈ ಬಾಂದ್ರ ಭಾರತ್ ನಗರದಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದರು. ಬುಧವಾರ ಕುವೈತ್ಗೆ ತೆರಳಿದ್ದರು. ನಿನ್ನೆ ಅಲ್ಲಿ ಕುಸಿದು ಬಿದ್ದಿದ್ದಾರೆ. ಮೃತರು ಪತ್ನಿ, 5 ಮಂದಿ ಮಕ್ಕಳನ್ನು ಅಗಲಿದ್ದಾರೆ.
