ಕಾಸರಗೋಡು: ವಿದ್ಯಾರ್ಥಿಗಳು ಗುಂಪಾಗಿ ನಿಲ್ಲುತ್ತಿರುವ ಸ್ಥಳಗಳಿಗೆ ಹೋಗಿ ಲೈಂಗಿಕ ಚೇಷ್ಠೆ ತೋರಿಸಿ ನನ್ನ ಜೊತೆಗೆ ಬರುವಿರಾ ಎಂದು ಕೇಳುತ್ತಿದ್ದ ಯುವಕನನ್ನು ಮಟ್ಟನ್ನೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ತಲಶ್ಶೇರಿ ಎರುವಟ್ಟಿ ಕಾಕುಂಮಲ ಅನ್ಸ್ ಹೌಸ್ನ ಕೆ. ಅರ್ಶಾದ್ (32) ಪೊಲೀಸರ ಸೆರೆಗೊಳಗಾದ ಯುವಕ. ತಲಶ್ಶೇರಿ, ಮಟ್ಟನ್ನೂರು, ಕಣ್ಣೂರು ಸೇರಿದಂತೆ ವಿವಿಧ ಪ್ರದೇಶಗಳ ಬಸ್ ನಿಲ್ದಾಣ ಮತ್ತಿತರೆಡೆಗಳಲ್ಲಿ ವಿದ್ಯಾರ್ಥಿನಿಯರು ಮತ್ತು ಯುವತಿಯರು ನಿಂತಿರುವ ಸ್ಥಳಗಳಿಗೆ ಹೋಗಿ ಅಲ್ಲಿ ಅವರೊಂದಿಗೆ ಅಶ್ಲೀಲ ಚೇಷ್ಠೆ ನಡೆಸಿ ಮಜಾ ಉಡಾಯಿಸಲು ನನ್ನ ಜೊತೆ ಬರುವಿರಾ ಎಂದು ಕೇಳುತ್ತಿರುವುದು ಈತನ ಹವ್ಯಾಸವಾಗಿದೆ. ಆತನನ್ನು ಸೆರೆಹಿಡಿಯಲು ಊರವರು ಮತ್ತು ಮಹಿಳೆಯರು ಹಲವು ಬಾರಿ ಪ್ರಯತ್ನಿಸಿದ್ದರೂ ಆ ವೇಳೆಗಳಲ್ಲೆಲ್ಲಾ ಆತ ತಪ್ಪಿಸಿಕೊಂಡಿದ್ದನು. ಆದರೆ ಈಗ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.