ನಗರದ ಶ್ರೀ ಅಯ್ಯಪ್ಪ ಮಂದಿರದಲ್ಲಿ ಛಾಯಾಚಿತ್ರ ಪ್ರತಿಷ್ಠೆ, ದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ನಗರದ ಶ್ರೀ ಧರ್ಮಶಾಸ್ತಾ ಭಜನಾಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಮುಂದಿನ ದಶಂಬರ್ ೧೧ರಿಂದ ನಡೆಯಲಿರುವ ಶ್ರೀ ಅಯ್ಯಪ್ಪ ದೇವರ ಶಿಲಾಮಯ ಪಾಣಿಪೀಠ, ನೂತನ ರಜತ ಛಾಯಾಚಿತ್ರ ಪ್ರತಿಷ್ಠೆ ಹಾಗೂ 56ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪನ್ ದೀಪೋತ್ಸವದ ಆಮಂತ್ರಣ ಪತ್ರಿಕೆ ಯನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಧರ್ಮಶಾಸ್ತಾ ಸೇವಾ ಸಂಘ ಅಧ್ಯಕ್ಷ ಸುರೇಶ್, ಕಾರ್ಯಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ,  ಪ್ರಧಾನ ಕಾರ್ಯದರ್ಶಿ ಸುರೇಶ್ ಸುವರ್ಣ, ಕೋಶಾಧಿಕಾರಿ ಅನಂತ್ ರಾಜ್, ಜೊತೆ ಕಾರ್ಯದರ್ಶಿಗಳಾದ ಮಹೇಶ್ ನೆಲ್ಲಿಕುಂಜೆ, ಧನಂಜಯ, ಸಮಿತಿ ಸದಸ್ಯರು, ಗುರುಸ್ವಾಮಿಗಳಾದ ಬಾಲಕೃಷ್ಣ, ಕರುಣಾಕರ, ಬಿ. ಭವಾನಿ ಶಂಕರ್, ಪುರುಷೋತ್ತಮ, ಕುಂಞಿಕೃಷ್ಣ ಹಾಗೂ ಸಂತೋಷ್ ಭಂಡಾರಿ, ಕಿಶೋರ್ ಕುಮಾರ್, ತುಕಾರಾಮ ಆಚಾರ್ಯ ಉಪಸ್ಥಿತರಿದ್ದರು.

You cannot copy contents of this page