ಹೊಳೆಗೆ ಹಾರಿದ ವ್ಯಕ್ತಿಯ ಮೃತದೇಹ ಪತ್ತೆ
ಕಾಸರಗೋಡು: ಮೊನ್ನೆ ಮಧ್ಯಾಹ್ನ ಚಂದ್ರಗಿರಿ ಸೇತುವೆಯಿಂದ ಎಲ್ಲರೂ ನೋಡುತ್ತಿದ್ದಂತೆಯೇ ಹೊಳೆಗೆ ಹಾರಿ ಬಳಿಕ ನಾಪತ್ತೆಯಾದ ವ್ಯಕ್ತಿಯ ಮೃತದೇಹವನ್ನು ಚೆಮ್ನಾಡ್ ಸಮೀಪ ಪೊಲೀಸರು ಪತ್ತೆಹಚ್ಚಿದ್ದಾರೆ. ಮೃತ ವ್ಯಕ್ತಿಯನ್ನು ಗುರುತು ಹಚ್ಚಲು ಈತನಕ ಸಾಧ್ಯವಾಗಿಲ್ಲ. ಈ ವ್ಯಕ್ತಿಯ ಮೃತದೇಹ ನಿನ್ನೆ ಸಂಜೆ ಚೆಮ್ನಾಡಿನ ಚಂದ್ರಗಿರಿ ಹೊಳೆ ಬಳಿ ಊರವರು ಪತ್ತೆಹಚ್ಚಿದ್ದಾರೆ. ಬಳಿಕ ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ ಬಳಿಕ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಮೃತದೇಹ ಬಹುತೇಕ ಜೀರ್ಣಗೊಂಡ ಸ್ಥಿತಿಯಲ್ಲಿದೆ. ಮೃತ ವ್ಯಕ್ತಿಗೆ ಸುಮಾರು ೪೦ ವರ್ಷ ಅಂದಾಜಿಸಲಾಗಿದೆ. ಅವರು ಬಿಳಿ ಬಣ್ಣದಲ್ಲಿ ಎದೆ ಭಾಗದಲ್ಲಿ ಕಪ್ಪು ಮತ್ತು ಕಂದು ಬಣ್ಣದ ಗೆರೆ ಹೊಂದಿರುವ ಟಿ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾರೆ. ಮೃತ ವ್ಯಕ್ತಿಯ ಗುರುತು ಹಚ್ಚುವ ಯತ್ನದಲ್ಲೂ ಪೊಲೀಸರು ತೊಡಗಿದ್ದಾರೆ.