ಅಸೌಖ್ಯ: ವಿದ್ಯುತ್ ಇಲಾಖೆ ತಾತ್ಕಾಲಿಕ ನೌಕರ ನಿಧನ
ಮಂಜೇಶ್ವರ: ಮೀಂಜ ಪಂಚಾಯತ್ ವ್ಯಾಪ್ತಿಯ ಬೇಕರಿ ಜಂಕ್ಷನ್ ಬಳಿಯ ಕಳಿಯೂರು ನಿವಾಸಿ ಮಾಧವ (63) ನಿಧನ ಹೊಂದಿದರು. ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲÁಗಿದ್ದರು. ಇವರು ಹಲವು ವರ್ಷಗಳ ಕಾಲ ಮಂಜೇಶ್ವರ, ವರ್ಕಾಡಿ ವಿದ್ಯುತ್ ಇಲಾಖೆಯಲ್ಲಿ ದಿನ ವೇತನದಲ್ಲಿ ಆಧಾರದಲ್ಲಿ ತಾತ್ಕಾಲಿಕ ಕೆಲಸವನ್ನು ನಿರ್ವಹಿ ಸುತ್ತಿದ್ದರು. ಮೃತರು ಪತ್ನಿ ಲಲಿತ, ಮಕ್ಕಳಾದ ವಸಂತ, ಸುರೇಶ, ಸುರೇಖ, ಸೊಸೆ ಅಶ್ವಿನಿ ಸಹೋದರ, ಸಹೋ ದರಿಯರಾದ ಅಬ್ಬಣ್ಣ, ಸುಂದರ, ರಾಜೀವಿ, ಲಕ್ಷಿ÷್ಮÃ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.