ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯಕೂಡದು- ಪರಿಶಿಷ್ಟ ಜಾತಿ ಮೋರ್ಛಾ
ತಿರುವನಂತಪುರ: ರಾಜ್ಯದಲ್ಲಿ ಸರಕಾರಿ ಐಡೆಡ್ ಶಾಲೆಗಳಲ್ಲಿ ಪ್ಲಸ್ ಟು ಪ್ರವೇಶಾತಿ ವೇಳೆ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯುವು ದನ್ನು ಶಿಕ್ಷಣ ಇಲಾಖೆ ನಿಲ್ಲಿಸಬೇಕೆಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಛಾ ರಾಜ್ಯ ಅಧ್ಯಕ್ಷ ಶಾಜುಮೋನ್ ವಟ್ಟೇಕಾಡ್ ಒತ್ತಾಯಿಸಿದ್ದಾರೆ.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಪಿಟಿಎ ಫಂಡ್ ಸಹಿತ ಯಾವುದೇ ಶುಲ್ಕ ಪಡೆಯಕೂಡದೆಂಬ ರಾಜ್ಯ ಸರಕಾರದ ನಿರ್ದೇಶ ಜ್ಯಾರಿಯಲ್ಲಿದ್ದರೂ ಅದನ್ನು ನಿರ್ಲಕ್ಷಿಸಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಪ್ಲಸ್‌ಟು ಪ್ರವೇಶ ವೇಳೆ ಹಣ ವಸೂಲು ಮಾಡಲಾಗುತ್ತಿದೆ. ಈ ಮೂಲಕ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳನ್ನು ಕೊಳ್ಳೆ ಹೊಡೆಯಲು ಶಿಕ್ಷಣ ಇಲಾಖೆ ಪ್ರಯತ್ನಿಸುತ್ತಿದೆ. ಪಿಟಿಎಗಳನ್ನು ಬಳಸಿಕೊಂಡು ಒತ್ತಾಯ ಮೂಲಕ ಹಣ ವಸೂಲು ಮಾಡುವ ಕ್ರಮವನ್ನು ನಿಲ್ಲಿಸಲು ಶಿಕ್ಷಣ ಇಲಾಖೆ ನಿರ್ದೇಶಕರು ನಿರ್ದೇಶಿಸಬೇಕೆಂದೂ ಶಾಜು ಮೋನ್ ಒತ್ತಾಯಿಸಿದ್ದಾರೆ.