ಮೀಂಜ: ಮೀಂಜ ಪಂಚಾ ಯತ್ ವ್ಯಾಪ್ತಿಯಲ್ಲಿ ಸಿಡಿಲು ನಿರೋಧಕಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಡಿ ವೈ ಎಫ್ ಐ ಮೀಂಜ 2 ವಿಲ್ಲೇಜ್ ಸಮಿತಿ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಇವರಿಗೆ ಮನವಿ ನೀಡಿದೆ.
ಕುಳೂರು ಶಾಲೆಯಲ್ಲಿ ಸಿಡಿಲು ಬಡಿದು ಶಾಲೆಯ ಎಲೆಕ್ಟ್ರಾನಿಕ್ ವಸ್ತು ಗಳು ನಾಶವಾಗಿದ್ದು, ವಿದ್ಯಾರ್ಥಿಗಳು ಅಪಾಯಗಳಿಲ್ಲದೆ ಪಾರಾಗಿದ್ದಾರೆ. ನಮ್ಮ ಪ್ರದೇಶದಲ್ಲಿ ಇನ್ನು ಇಂತಹ ಅನಾಹುತಗಳು ನಡೆಯಬಾರದು ಎಂಬ ಕಾರಣದಿಂದ ಮೀಂಜ ಪಂಚಾಯತ್ ವ್ಯಾಪ್ತಿಯಲ್ಲಿ ಸಿಡಿಲು ನಿರೋಧಕಗಳನ್ನು ಸ್ಥಾಪಿಸಲು ಡಿ ವೈ ಎಫ್ ಐ ವತಿಯಿಂದ ಪಂಚಾಯತ್ ಅಧ್ಯಕ್ಷರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಡಿಫಿ ವಿಲ್ಲೇಜ್ ಕಾರ್ಯದರ್ಶಿ ಉದಯ ಸಿ ಎಚ್, ಬ್ಲೋಕ್ ಸಮಿತಿಯ ಜತೆ ಕಾರ್ಯದರ್ಶಿ ಅನಿಲ್ ಚಿಗುರುಪಾದೆ, ಬ್ಲೋಕ್ ಸಮಿತಿ ಸದಸ್ಯೆ ಪದ್ಮಜಾ ಕುಳೂರು, ಕುಳೂರಿನ ವಾರ್ಡ್ ಸದಸ್ಯರಾದ ಜನಾರ್ದನ ಪೂಜಾರಿ ಜೊತೆಗಿದ್ದರು.
