ಕಾರಡ್ಕ ಸೊಸೈಟಿ ವಂಚನೆ ಪ್ರಕರಣ ತನಿಖೆ ರಾಜ್ಯ ಕ್ರೈಂಬ್ರಾಂಚ್ಗೆ ಹಸ್ತಾಂತರ
ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಿಂದ 4.76 ಕೋಟಿ ರೂಪಾಯಿ ಲಪಟಾಯಿಸಿದ ಪ್ರಕರಣದ ತನಿಖೆಯನ್ನು ರಾಜ್ಯ ಕ್ರೈಂಬ್ರಾಂಚ್ಗೆ ಹಸ್ತಾಂತರಿಸಲಾಗಿದೆ. ರಾಜ್ಯ ಕ್ರೈಂಬ್ರಾಂಚ್ನ ಆರ್ಥಿಕ ಅಪರಾಧ ಪತ್ತೆ ವಿಭಾಗ ಈ ವಂಚನಾ ಪ್ರಕರಣದ ತನಿಖೆ ನಡೆಸಲಿದೆ.
ಈ ಪ್ರಕರಣದ ತನಿಖೆಯನ್ನು ಮೊದಲು ಸ್ಥಳೀಯ ಪೊಲೀಸರು ನಡೆಸಿದ್ದರು. ಬಳಿಕ ತನಿಖೆಯನ್ನು ಜಿಲ್ಲಾ ಕ್ರೈಂಬ್ರಾಂಚ್ಗೆ ಹಸ್ತಾಂತರಿಸ ಲಾಗಿತ್ತು. ಜಿಲ್ಲಾ ಕ್ರೈಂಬ್ರಾಂಚ್ ನಡೆಸಿದ ತನಿಖೆಯನ್ನು ಸೊಸೈಟಿಯ ಸೆಕ್ರೆಟರಿಯಾಗಿದ್ದ ಕರ್ಮಂತೋಡಿ ಬಾಳಕಂಡದ ಕೆ. ರತೀಶನ್, ಕಣ್ಣೂರು ಚೊವ್ವ ನಿವಾಸಿಯೂ ಪ್ರಸ್ತುತ ಪಯ್ಯನ್ನೂರಿನಲ್ಲಿ ವಾಸಿಸುವ ಅಬ್ದುಲ್ ಜಬ್ಬಾರ್ ಯಾನೆ ಮಂಞಕಂಡಿ ಜಬ್ಬಾರ್, ಕಾಞಂಗಾಡ್, ಅದಿಯೂರು ನಿವಾಸಿ ಅನಿಲ್ ಕುಮಾರ್, ಕಲ್ಲಿಕೋಟೆ ನಿವಾಸಿ ನಬೀಲ್ ಮೊದಲಾದವರನ್ನು ಸೆರೆ ಹಿಡಿಯಲಾಗಿದೆ. ರತೀಶನ್ನನ್ನು ಇತ್ತೀಚೆಗೆ ಸೊಸೈಟಿಗೆ ತಲುಪಿಸಿ ಮಾಹಿತಿ ಸಂಗ್ರಹಿಸಲಾಗಿತ್ತು. ಸೊಸೈಟಿಯಿಂದ ಲಪಟಾಯಿಸಿದ ಹಣ ವನ್ನು ಯಾವ ಅಗತ್ಯಕ್ಕಾಗಿ ಬಳಸಲಾಗಿದೆ, ಹಣ ಯಾರ ಕೈಯಲ್ಲಿದೆ ಎಂಬುವುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ಯನ್ನು ರಾಜ್ಯ ಕ್ರೈಂಬ್ರಾಂಚ್ಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.