ತೀವ್ರಗೊಂಡ ಮಳೆ: ಮುಂದುವರಿದ ಕಡಲ್ಕೊರೆತ; ಉಪ್ಪಳ ಕರಾವಳಿಯಲ್ಲಿ ಮಂದಿರ, ಮನೆಗಳು ಅಪಾಯ ಭೀತಿಯಲ್ಲಿ
ಉಪ್ಪಳ: ಮಳೆ ಬಿರುಸುಗೊ ಳ್ಳ ತೊಡಗುವುದರೊಂದಿಗೆ ವಿವಿಧೆಡೆಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಉಪ್ಪಳ ವ್ಯಾಪ್ತಿಯ ಕರಾವಳಿ ಪ್ರದೇಶದ ವಿವಿಧ ಕಡೆಗಳಲ್ಲಿ ಕಡಲ್ಕೊರೆತ ಮುಂದುವರಿಯುತ್ತಿದ್ದು, ಮಂದಿರ, ಮನೆಗಳು ಅಪಾಯದ ಭೀತಿಯಲ್ಲಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಗೊಳಪಟ್ಟ ಉಪ್ಪಳ ಸಮೀಪದ ಹನುಮಾ ನ್ನಗರ, ಮಣಿಮುಂಡ, ಶಾರದಾ ನಗರ, ಮುಸೋಡಿ ಮೊದಲಾದ ಕಡೆಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು, ಸ್ಥಳೀಯರಲ್ಲಿ ಭೀತಿ ಸೃಷ್ಟಿಯಗಿದೆ. ಶಾರದಾನಗರದಲ್ಲಿ ಶ್ರೀ ಶಾರದಾ ಭಜನಾ ಮಂದಿರ, ವ್ಯಾಯಾಮ ಶಾಲೆ, ಕಾರ್ಯಾಲಯ ಕಟ್ಟಡಗಳು ಅಪಾಯದಂಚಿನಲ್ಲಿದೆ. ಅಲ್ಲದೆ ಇದೇ ಪರಿಸರದ ಮಣಿಮುಂಡ, ಹನುಮಾನ್ನಗರ, ಮೂಸೋಡಿ ಮೊದಲಾದ ಪ್ರದೇಶದ ಹಲವಾರು ಮನೆಗಳು ಅಪಾಯದಂಚಿನಲ್ಲಿದ್ದು, ಆತಂಕ ಸೃಷ್ಟಿಯಾಗಿದೆ. ವಿವಿಧ ಕಡೆಗಳಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕಗ್ಗಲ್ಲಿನಿಂದ ನಿರ್ಮಿಸಿದ ತಡೆಗೋಡೆ ಹಾಗೂ ಮೂಸೋಡಿಯಿಂದ ಹನುಮಾನ್ನಗರ ತನಕ ನಿರ್ಮಿಸಿದ ಪುಲಿಮುಟ್ಟು ಸಮುದ್ರ ಪಾಲಾಗುತ್ತಿರು ವುದಾಗಿ ಸ್ಥಳೀಯರು ಆರೋಪಿಸಿ ದ್ದಾರೆ. ಇದಕ್ಕೆ ಅಧಿಕಾರಗಳ ನಿರ್ಲ ಕ್ಷ್ಯವೇ ಕಾರಣವೆಂದು ಊರವರು ದೂರಿದ್ದಾರೆ. ಹನುಮಾನ್ನಗರದ ಸಹಿತ ಪರಿಸರ ಪ್ರದೇಶದಲ್ಲಿ ವ್ಯವಸ್ಥಿತ ತಡೆಗೋಡೆ ನಿರ್ಮಿಸಲು ಊರವರು ಆಗ್ರಹಿಸಿದ್ದಾರೆ.