ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಕಿರುಕುಳಕ್ಕೆತ್ನ: ಯುವಕ ಸೆರೆ

ಬದಿಯಡ್ಕ: ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿಯಾಗಿ ಮನೆಗೆ ಮರಳುತ್ತಿದ್ದ ೧೭ರ ಹರೆಯದ ಬಾಲಕಿಗೆ ಬಸ್‌ನಲ್ಲಿ ಕಿರುಕುಳ ನೀಡಲು ಯತ್ನಿಸಿದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಆರೋಪಿಯನ್ನು ಬದಿಯಡ್ಕ   ಪೊಲೀಸರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

ಪೆರಡಾಲ ಚುಳ್ಳಿಕ್ಕಾನ ನಿವಾಸಿ ಸುದರ್ಶನ (೩೪) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿ ದ್ದಾರೆ.  ಬಾಲಕಿ ನಿನ್ನೆ ಕಾಸರಗೋಡಿನ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿಯಾಗಿ ಮನೆಗೆ ಬಸ್‌ನಲ್ಲಿ ಮರಳಿದ್ದಾಳೆ. ಬಾಲಕಿ ಮಾತ್ರವಿದ್ದ ಸೀಟಿನಲ್ಲಿ ಸುದರ್ಶನ ಕುಳಿತಿದ್ದನೆನ್ನಲಾಗಿದೆ. ಪ್ರಯಾಣ ಮಧ್ಯೆ ಸುದರ್ಶನ ಬಾಲಕಿಯ  ದೇಹ ಸ್ಪರ್ಶಿಸಿದ್ದಾನೆನ್ನಲಾಗಿದೆ. ಇದನ್ನರಿತ ಬಾಲಕಿ ಬೊಬ್ಬೆ  ಹಾಕಿದ್ದಾಳೆ. ವಿಷಯ ತಿಳಿದು ಬಸ್‌ನ್ನು ಬದಿಯಡ್ಕ ಠಾಣೆಗೆ ತಲುಪಿಸಿ ಆರೋಪಿಯನ್ನು ವಿಚಾರಿಸು ವಂತೆ ಪ್ರಯಾಣಿಕರು ಆಗ್ರಹಪಟ್ಟಿದ್ದಾರೆ. ಇದರಂತೆ ಬಸ್‌ನ್ನು ಬದಿಯಡ್ಕ ಠಾಣೆಗೆ ಕೊಂಡೊಯ್ಯುತ್ತಿದ್ದಂತೆ ಆರೋಪಿ ಬಸ್‌ನಿಂದ ಇಳಿದು ಓಡಿದ್ದಾನೆ. ಕೂಡಲೇ ಆತನನ್ನು ಬೆನ್ನಟ್ಟಿದ ಪೊಲೀಸರು ಮೂಕಂಪಾರೆ ಚರ್ಚ್  ಸಮೀಪದಿಂದ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್‌ಐಗಳಾದ ಪಿ.ಕೆ. ವಿನೋದ್ ಕುಮಾರ್, ರಮೇಶ್, ಪೊಲೀಸರಾದ ವರ್ಗೀಸ್, ಮನೂಪ್ ಎಂಬಿವರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಸುದರ್ಶನನನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ.

RELATED NEWS

You cannot copy contents of this page