ಗುಡ್ಡೆ ಜರಿದು ಬಿದ್ದು ಪುಂಡಿಕಾಯಿ ಬಯಲು ತೋಟ ಜಲಾವೃತ

ಮುಳ್ಳೇರಿಯ: ಕಾರಡ್ಕ ಪಂಚಾ ಯತ್ 2ನೇ ವಾರ್ಡ್ ವ್ಯಾಪ್ತಿಯ ಪುಂಡಿಕಾಯಿ ಬಯಲಿನಲ್ಲಿ ಗದ್ದೆ ಬದಿಯ ಗುಡ್ಡೆ ಜರಿದು ಎಕ್ರೆಗಟ್ಟಲೆ  ತೋಟ ಜಲಾವೃತವಾಗಿದೆ. ಪುಂಡಿ ಕಾಯಿ ಬಯಲಿನ ಮಧ್ಯಭಾಗದಲ್ಲಿ ಗೋಪಾಲ ಮಣಿಯಾಣಿ ಎಂಬವರ ಮನೆ  ಬದಿಯ ಗುಡ್ಡೆ ಜರಿದಿದೆ. ಇದರಿಂದಾಗಿ ತೋಡು ಸಂಪೂರ್ಣ ಮುಚ್ಚಿದ್ದು ಮಳೆ ನೀರು ತೋಟಗಳ ಮೂಲಕ ಹರಿಯುತ್ತಿದೆ. ತೋಟ ನದಿಯಂತಾಗಿದೆ. ಬಾಳೆ, ಕಂಗಿನ  ಗಿಡಗಳು ನಾಶವಾಗಿವೆ. ಸ್ಥಳೀಯರಾದ ದಿ| ನಾರಾಯಣ ಬಲ್ಲಾಳ್‌ರ  ತೋಟ, ಬಾಲಕೃಷ್ಣ ಮಾಸ್ತರ್‌ರ ತೋಟ ಹಾಗೂ ಅದರ ಕೆಳಗಿನ ಉಳಿದ ತೋಟಗಳಲ್ಲಿ ನೀರು ತುಂಬಿಕೊಂಡಿದೆ. ಗುಡ್ಡೆ ಇನ್ನು ಜರಿದು ಬೀಳುವ ಭೀತಿ ಸ್ಥಳೀಯರಲ್ಲಿದೆ.

RELATED NEWS

You cannot copy contents of this page