ವಿದ್ಯಾರ್ಥಿ ರಿಯಾಯಿತಿ ವಿವಾದ ಪೊಲೀಸರ ನೇತೃತ್ವದಲ್ಲಿ ಪರಿಹಾರ

ಕುಂಬಳೆ: ಪ್ರಯಾಣ ರಿಯಾಯಿತಿ ವಿಷಯಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳು ಹಾಗೂ ಬಸ್ ಸಿಬ್ಬಂದಿ ಮಧ್ಯೆ ವಿವಾದ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಬಸ್‌ನ್ನು ಪೊಲೀಸ್ ಠಾಣೆಗೆ ತಲುಪಿಸಲಾಯಿತು. ಇಂದು ಬೆಳಿಗ್ಗೆ ಆರಿಕ್ಕಾಡಿ ಭಾಗದಿಂದ ಕುಂಬಳೆಯ ಶಿಕ್ಷಣ ಸಂಸ್ಥೆಗಳಿಗೆ ಬರುವ ವಿದ್ಯಾರ್ಥಿಗಳು ಹಾಗೂ ತಲಪಾಡಿಯಿಂದ ಕಾಸರಗೋಡಿನತ್ತ ಬರುತ್ತಿದ್ದ ಬಸ್‌ವೊಂದರ    ನಿರ್ವಾ ಹಕನ ಮಧ್ಯೆ ವಿವಾದವುಂಟಾಗಿದೆ. ಇದರಿಂದ ಬಸ್ಸನ್ನು ಕುಂಬಳೆ ಪೊಲೀಸ್ ಠಾಣೆಗೆ ತಲುಪಿಸಲಾಯಿತು.

ಅಲ್ಲಿ ಇನ್ಸ್‌ಪೆಕ್ಟರ್ ಬಿಜೋಯ್, ಎಸ್.ಐ. ಟಿ.ಎಂ. ವಿಪಿನ್ ವಿದ್ಯಾರ್ಥಿಗಳು ಹಾಗೂ ಬಸ್ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ವಿವಾದಕ್ಕೆ ಪರಿಹಾರ ಕಾಣಲಾಯಿತು.

You cannot copy contents of this page