ಪೊಸಡಿಗುಂಪೆ ಪರಿಸರ ರಸ್ತೆ ಉದ್ದಕ್ಕೂ ಕಾಡುಪೊದೆಗಳು: ಅಪಘಾತ ಭೀತಿ
ಬಾಯಾರು: ಪೊಸಡಿಗುಂಪೆಗೆ ಸಾಗುವ ರಸ್ತೆ ಉದ್ದಕೂ ಕಾಡು ಪೊದೆಗಳು ತುಂಬಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ 9ಮತ್ತು 10ನೇ ವಾರ್ಡ್ ಸಂಗಮಿಸುವ ಪೆರ್ಮುದೆ-ಬಾಯಾರು ಪದವು ಮಧ್ಯೆ ಪೊಸಡಿಗುಂಪೆ ಪ್ರದೇಶದಲ್ಲಿ ರಸ್ತೆಯ ಇಕ್ಕೆಡೆಗಳಲ್ಲಿ ಕಾಡು ಪೊದೆ ತುಂಬಿ ವಾಹನ ಸಂಚಾರಕ್ಕೆ ಭೀತಿ ಸೃಷ್ಟಿಯಾಗುತ್ತಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ. ಪೊದೆ ರಸ್ತೆಗಡ್ಡವಾಗಿ ಬೆಳೆದಕಾರಣ ಅತ್ತಿತ್ತ ಸಂಚರಿಸುವ ವಾಹನಗಳು ಕಣ್ಣಿಗೆ ಗೋಚರಿಸದೆ ತಿರುವುನಲ್ಲಿ ಅಪಘಾತಕ್ಕೂ ಕಾರಣವಾಗುತ್ತಿದೆ. ವಿದ್ಯುತ್ ತಂತಿ ಮೇಲೆ ಪೊದೆಗಳು ಭಾಗಿಕೊಂಡಿದ್ದು, ಆತಂಕ ಸೃಷ್ಟಿಯಾಗಿದೆ. ಈ ಪರಿಸರದಲ್ಲಿ ಕಾಡು ಪೊದೆಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.