ಮಾತೃಭಾಷೆ ಕೊಂಕಣಿ ಎಂಬ ಕಾರಣದಿಂದ ಕಾಸರಗೋಡಿನ ಕನ್ನಡ ವಿದ್ಯಾರ್ಥಿನಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ನಿಷೇಧ-ದೂರು
ಕಾಸರಗೋಡು: ಒಂದನೇ ತರಗತಿಯಿಂದ ಹೈಯರ್ ಸೆಕೆಂಡರಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಕಾಸರಗೋ ಡಿನ ವಿದ್ಯಾರ್ಥಿ ನಿಯೋರ್ವೆ ಕರ್ನಾಟ ಕದಲ್ಲಿ ಉನ್ನತ ಶಿಕ್ಷಣಕ್ಕಾಗಿ ಸಿಇಟಿ ಬರೆದು ಉತ್ತೀರ್ಣಳಾದರೂ ಆಕೆಗೆ ಸೀಟು ಲಭಿಸಿಲ್ಲವೆಂಬ ದೂರುಂಟಾಗಿದೆ.
ವಿದ್ಯಾರ್ಥಿನಿಯ ಮಾತೃಭಾಷೆ ಕೊಂಕಣಿ ಎಂಬ ಕಾರಣ ನೀಡಿ ಆಕೆಗೆ ಸೀಟು ನೀಡಲು ಅಧಿ ಕಾರಿಗಳು ಹಿಂಜರಿದಿದ್ದಾರೆ ಎನ್ನಲಾಗುತ್ತಿದೆ. ಬೇಳ ನಿವಾಸಿ ಯಾದ ಡೆಜ್ಲಿನ್ ಕ್ರಾಸ್ತ ಎಂಬ ವಿದ್ಯಾರ್ಥಿನಿ ಕರ್ನಾಟಕ ಸಿಇಟಿ ಬರೆದು ಉತ್ತೀರ್ಣಳಾಗಿದ್ದಳು. ಈಕೆಗೆ ಬೆಂಗಳೂರಿನಲ್ಲಿ ಪ್ರಮಾಣಪತ್ರ ಪರಿಶೀಲನೆಗಾಗಿ ಹಾಜರಾಗುವಂತೆ ಸೂಚನೆಯೂ ಲಭಿಸಿತ್ತು. ಇದರಂತೆ ಬೆಂಗಳೂರಿಗೆ ಶಿಕ್ಷಣ ಅರ್ಹತೆಯ ಎಲ್ಲಾ ಪ್ರಮಾಣಪತ್ರಗಳೊಂದಿಗೆ ತೆರಳಿದ ವಿದ್ಯಾರ್ಥಿನಿಗೆ ಸೀಟು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆ ನಿರಾಸೆಗೊಳಗಾಗಬೇಕಾಗಿ ಬಂದಿದೆ.
ಶಾಲಾ ಪ್ರಮಾಣಪತ್ರದಲ್ಲಿ ವಿದ್ಯಾರ್ಥಿನಿಯ ಮಾತೃಭಾಷೆ ಕೊಂಕಣಿ ಎಂದು ದಾಖಲಾಗಿರುವುದನ್ನು ಕಾರಣ ನೀಡಿ ಆಕೆಗೆ ಸೀಟು ನಿರಾಕರಿ ಸಿರುವುದಾಗಿ ದೂರಲಾಗಿದೆ.
ಒಂದನೇ ತರಗತಿಯಿಂದಲೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿನಿ ಹೈಯರ್ ಸೆಕೆಂಡರಿ ಯಲ್ಲಿ ದ್ವಿತೀಯ ಭಾಷೆಯಾಗಿ ಕನ್ನಡವನ್ನೇ ಆಯ್ದುಕೊಂಡಿದ್ದಳು. ಹೈಯರ್ ಸೆಕೆಂಡರಿಯಲ್ಲಿ ೮೦ ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿದ ಈಕೆ ಕರ್ನಾಟಕ ಸಿಇಟಿ ಬರೆದು ಉತ್ತೀರ್ಣಳಾಗಿ ಬಿಎಸ್ಸಿ (ನರ್ಸಿಂಗ್)ಗೆ ಅರ್ಹತೆ ಪಡೆದಿದ್ದಳು. ಆದರೆ ಪ್ರಮಾಣಪತ್ರ ಪರಿಶೀಲನೆ ವೇಳೆ ವಿದ್ಯಾರ್ಥಿನಿಯ ಮಾತೃಭಾಷೆ ಕೊಂಕಣಿಯೆಂದು ದಾಖಲಾಗಿರು ವುದನ್ನು ಮಾತ್ರ ಕಾರಣವಾಗಿಸಿ ಆಕೆಗೆ ಸೀಟು ನಿರಾಕರಿಸಿರುವುದಾಗಿ ದೂರಲಾಗಿದೆ. ಸಿಇಟಿ ಬರೆಯುವ ಮುಂಚೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಈಕೆ ಉತ್ತೀ ರ್ಣಳಾಗಿದ್ದಾಳೆ. ಅಲ್ಲದೆ ಗಡಿನಾಡು ಕಾಸರಗೋಡಿನ ಕನ್ನಡ ವಿದ್ಯಾ ರ್ಥಿನಿಯೆಂಬ ಪ್ರಮಾಣ ಪತ್ರವನ್ನು ಸಲ್ಲಿಸಿದರೂ ಅಧಿಕಾರಿಗಳು ಅದನ್ನು ಗಣನೆಗೆ ತೆಗೆದುಕೊಂಡಿ ಲ್ಲವೆನ್ನಲಾಗಿದೆ.
ಕನ್ನಡ, ತುಳು, ಕೊಡವ ಅಥವಾ ಬ್ಯಾರಿ ಭಾಷೆಗಳು ಮಾತೃಭಾಷೆ ಯಾಗಿದ್ದರೆ ಮಾತ್ರವೇ ಕರ್ನಾಟಕ ದಲ್ಲಿ ಸೀಟು ಲಭಿಸಬಹುದಾಗಿದೆ ಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷೆಗೆ ಸಲ್ಲಿಸಿದ ಅರ್ಜಿಯಲ್ಲಿ ಮಾತೃಭಾಷೆ ಕೊಂಕಣಿ ಎಂದು ನಮೂದಿಸಲಾಗಿದೆ. ಆದರೆ ಪರೀಕ್ಷೆ ಬರೆದು ಉತ್ತೀರ್ಣಳಾದ ಬಳಿಕ ಈ ರೀತಿಯ ಕಾರಣ ನೀಡಿರುವುದಾಗಿ ವಿದ್ಯಾರ್ಥಿನಿಯ ಕುಟುಂಬ ತಿಳಿಸುತ್ತಿದೆ.
ಒಂದನೇ ತರಗತಿಯಿಂದ ಹೈಯರ್ ಸೆಕೆಂಡರಿ ವರೆಗೆ ಕನ್ನಡದಲ್ಲೇ ಕಲಿತ ವಿದ್ಯಾರ್ಥಿನಿಯನ್ನು ಮಾತೃ ಭಾಷೆ ಕೊಂಕಣಿ ಎಂಬ ಕಾರಣ ದಿಂದ ಸೀಟು ನೀಡದಿರುವುದು ವಿದ್ಯಾರ್ಥಿನಿ ಹಾಗೂ ಆಕೆಯ ಕುಟುಂಬಕ್ಕೆ ಸಂಕಷ್ಟ ಸೃಷ್ಟಿಸಿದೆ.
ಗಡಿನಾಡು ಕಾಸರಗೋಡಿನ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಶಿಕ್ಷಣ ಸೌಲಭ್ಯ ಲಭಿಸಬಹುದೆಂಬ ನಿರೀಕ್ಷೆಯಿಂದ ಸಿಇಟಿ ಬರೆದು ಉತ್ತೀರ್ಣಳಾಗಿದ್ದು ಆದರೆ ಕೊನೆಯ ಕ್ಷಣ ಸೀಟು ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.