ಮುಳಿಂಜಗುತ್ತು ಸಂಜೀವ ಭಂಡಾರಿ ನಿಧನ
ಉಪ್ಪಳ: ಉಪ್ಪ ಳ ಬಳಿಯ ಮುಳಿಂಜಗುತ್ತು ಮನೆತನದ ಯಜಮಾನ ಸಂಜೀವ ಭಂಡಾರಿ [87] ನಿನ್ನೆ ನಿಧನರಾದರು. ಮುಳಿಂಜ ಶ್ರೀ ಮಹಾಲಿಗೇಶ್ವರ ದೇವಸ್ಥಾನದ ಅಧ್ಯಕ್ಷರಾಗಿ ಕ್ಷೇತ್ರದ ಅಭಿವೃದಿಗೆ ಕಾರಣಕರ್ತರಾಗಿದ್ದರು. ನಾಟಿ ವೈದ್ಯರು, ಆರ್.ಎಸ್.ಎಸ್, ಬಿಜೆಪಿಯ ಹಿರಿಯ ಕಾರ್ಯಕರ್ತರೂ ಆಗಿದ್ದರು. ಮೃತರು ಮಕ್ಕಳಾದ ನಾರಾಯಣ ಭಂಡಾರಿ, ಬಾಲಕೃಷ್ಣ ಭಂಡಾರಿ, ನಿತ್ಯಾನಂದ ಭಂ ಡಾರಿ, ಚಂದ್ರಶೇಖರ ಭಂಡಾರಿ, ರವಿರಾಜ್ ಭಂಡಾರಿ, ಶಿವಪ್ರಸಾದ್ ಭಂಡಾರಿ, ಶಶಿಕಲ, ಸತ್ಯವತಿ, ಸೊಸೆಯಂ ದಿರಾದ ವಿಜಯಲಕ್ಷಿ÷್ಮÃ, ಸುನಿತಾ, ಲಕ್ಷಿ, ಪ್ರಮೀಳ, ಸ್ವಾತಿ, ಅಂಕಿತ, ಅಳಿ ಯಂದಿರಾದ ಯತಿರಾಜ್ ರೈ, ರವೀಂದ್ರ ರೈ, ಸಹೋದರರಾದ ಮಾರಪ್ಪ ಭಂಡಾರಿ, ಬಾಲಕೃಷ್ಣ ಭಂಡಾರಿ, ಸುಂದರ ಭಂಡಾರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಮುತ್ತಕ್ಕೆ, ಓರ್ವ ಪುತ್ರ ಜಯರಾಮ ಭಂಡಾರಿ ಈ ಹಿಂದೆ ನಿಧನರಾಗಿದ್ದಾರೆ. ನಿಧನಕ್ಕೆ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಸಂತಾಪ ಸೂಚಿಸಿದೆ.