ವ್ಯಾಪಾರ ಅಗತ್ಯಕ್ಕಿರುವ ಅಡುಗೆ ಅನಿಲ ಬೆಲೆ ಕಡಿತ
ಹೊಸದಿಲ್ಲಿ: ದೇಶದಲ್ಲಿ ವ್ಯಾಪಾರ ಅಗತ್ಯಗಳಿಗೆ ಬಳಸುವ ಅಡುಗೆ ಅನಿಲ ಬೆಲೆ ಕಡಿತಗೊಳಿಸಲಾಗಿದೆ.
ಇದರಂತೆ ಹೋಟೆಲ್‌ಗಳಲ್ಲಿ ಬಳಸುವ 19 ಕಿಲೋ ಸಿಲಿಂಡರ್ ಗಳಿಗೆ 31 ರೂಪಾಯಿಗಳ ಕಡಿತವುಂಟಾಗಿದೆ. ಇದರಿಂದ ಸಿಲಿಂಡರ್‌ಗೆ ನವೀಕೃತ ಬೆಲೆ ಕಾಸರಗೋಡಿನಲ್ಲಿ 1680 ರೂಪಾಯಿಗಳಾಗಿವೆ. ಇದೇ ವೇಳೆ ಗೃಹ ಬಳಕೆ ಅಡುಗೆ ಅನಿಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ವಾಗಿಲ್ಲ. ಈ ಹಿಂದಿನ ತಿಂಗಳು ಗಳಲ್ಲೂ ವ್ಯಾಪಾರ ಅಗತ್ಯಗಳಿಗಿರುವ ಅಡುಗೆ ಅನಿಲ ಬೆಲೆಯನ್ನು ಕಂಪೆನಿಗಳು ಕಡಿಮೆ ಮಾಡಿದ್ದವು. ಎಪ್ರಿಲ್‌ನಲ್ಲಿ 30.50 ರೂ., ಮೇ ತಿಂಗಳಲ್ಲಿ 19 ರೂ., ಜೂನ್‌ನಲ್ಲಿ 69.50 ರೂ. ಕಡಿಮೆ ಮಾಡ ಲಾಗಿತ್ತು. ಪ್ರತೀ ತಿಂಗಳು ಒಂದನೇ ತಾರೀಕಿನಂದು ಇಂಡ್ಯನ್ ಓಯಿಲ್ ಕಾರ್ಪರೇಶನ್, ಭಾರತ್ ಪೆಟ್ರೋಲಿ ಯಂ, ಹಿಂದೂಸ್ತಾನ್ ಪೆಟ್ರೋಲಿ ಯಂ ಮೊದಲಾದ ಕಂಪೆನಿಗಳು ಅಡುಗೆ ಅನಿಲ ಬೆಲೆಯನ್ನು ನವೀಕರಿಸುತ್ತಿವೆ.
ಇದೇ ವೇಳೆ ಸಿಲಿಂಡರ್ ಯಥಾ ರ್ಥ ಗ್ರಾಹಕನಿಗೆ ತಲುಪುತ್ತಿದೆಯೇ ಎಂದು ಖಚಿತಪಡಿಸಲು ಗ್ಯಾಸ್ ಕನೆಕ್ಷನ್ ಮಸ್ಟರಿಂಗ್ (ಇ.ಕೆ.ವೈ.ಸಿ ಅಪ್‌ಡೇಶನ್) ಕಡ್ಡಾಯಗೊಳಿ ಸಲಾಗಿದೆ. ಕೊನೆಯ ದಿನಾಂಕವನ್ನು ಕೇಂದ್ರ ಸರಕಾರ ಶೀಘ್ರ ಘೋಷಿಸಲಿದೆ.
ಪ್ರಧಾನಮಂತ್ರಿ ಉಜ್ವಲ್ ಯೋಜನೆಯಲ್ಲಿರುವವರು ಅಪ್ ಡೇಶನ್ ಮಾಡಬೇಕಾಗಿದೆ ಎನ್ನಲಾ ಗುತ್ತಿದೆ. ಆದರೆ ಎಲ್ಲರೂ ಅಪ್‌ಡೇ ಶನ್ ಮಾಡಬೇಕೆಂದು ಅನಿಲ ವಿತರಣೆ ಕಂಪೆನಿಗಳು ತಿಳಿಸಿವೆ.