ಇರಿಟ್ಟಿಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ನೀರುಪಾಲು
ಕಣ್ಣೂರು: ಹೊಳೆಯ ನೀರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. ಇರಿಕ್ಕೂರ್ ಖಾಸಗಿ ಕಾಲೇಜಿನ ಸೈಕಾಲಜಿ ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಎಡೆಯನ್ನೂರ್ ನಿವಾಸಿ ಶಹರ್‌ಬಾನ (28), ಅಂಜರಕಂಡಿ ನಿವಾಸಿ ಸೂರ್ಯ (21) ಎಂಬಿವರು ನಾಪತ್ತೆಯಾಗಿದ್ದಾರೆ. ನಿನ್ನೆ ಸಂಜೆ ೪ ಗಂಟೆ ವೇಳೆ ದುರ್ಘಟನೆ ಸಂಭವಿಸಿದೆ. ಸಹಪಾಠಿಯ ಪಡಿಯೂರ್ ಪೂವತ್ತ್ ಮನೆಯಿಂದ ಹಿಂತಿರುಗುವಾಗ ವಾಟರ್ ಅಥೋರಿಟಿಯ ಟ್ಯಾಂಕ್‌ನ ಸಮೀಪದ ಹೊಳೆಗೆ ಇಳಿದಿದ್ದಾರೆ. ಅಲ್ಲಿದ್ದವರು ಹೊಳೆಯಲ್ಲಿ ಸೆಳೆತವಿದೆ ಎಂದು ಮುನ್ನೆಚ್ಚರಿಕೆ ನೀಡಿದ್ದರೂ ಕೂಡಾ ಇವರು ನೀರಿಗೆ ಇಳಿದಿದ್ದು, ತಕ್ಷಣವೇ ನೀರುಪಾಲಾಗಿದ್ದಾರೆ. ಅಲ್ಲಿದ್ದ ಮೀನುಕಾರ್ಮಿಕರು ಬಲೆ ಬೀಸಿ ವಿದ್ಯಾರ್ಥಿನಿಯರನ್ನು ಹಿಡಿಯಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕದಳದ ಸ್ಕೂಬಾ ಡೈವರ್‌ಗಳು ತಲುಪಿ ಹುಡುಕಾಡಿದರೂ ಅವರನ್ನು ಪತ್ತೆಹಚ್ಚಲಾಗಲಿಲ್ಲ.