ಹೊಯ್ಗೆ ದಂಧೆ ವಿರುದ್ಧ ಎಸ್.ಐ ಕಾರ್ಯಾಚರಣೆ: ದೋಣಿ ನಾಶ

ಕುಂಬಳೆ: ಕುಂಬಳೆ ಪೊಲೀಸ್ ಠಾಣೆಗೆ ನೂತನವಾಗಿ ಎಸ್‌ಐ ಯಾಗಿ ನೇಮಕಗೊಂಡ ಕೆ. ಶ್ರೀಜೇಶ್ ಹೊಯ್ಗೆ ದಂಧೆ ವಿರುದ್ಧ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.ಇಂದು ಮುಂಜಾನೆ ೨.೩೦ರ ವೇಳೆ ಶಿರಿಯ ಒಳಯಂ ಹೊಳೆ ಬದಿಗೆ ತಲುಪಿಸಿದ ಎಸ್.ಐ. ಹಾಗೂ ಪೊಲೀಸರು ಅಲ್ಲಿ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಲು ಬಳಸುವ ದೋಣಿಯೊಂದನ್ನು ಜೆಸಿಬಿ ಬಳಸಿ ಕೆಡವಿ ಹಾಕಿದ್ದಾರೆ. ಇದೇ ರೀತಿ ಠಾಣೆ ವ್ಯಾಪ್ತಿಯಲ್ಲಿ ಅನಧಿಕೃತ ಹೊಯ್ಗೆ ಸಂಗ್ರಹ ನಡೆಯುವ ಇತರೆಡೆಗಳಿಗೂ ದಾಳಿ ನಡೆಸಲು ಹಾಗೂ ಹೊಯ್ಗೆ ಮಾಫಿಯಾಗಳನ್ನು ಮಟ್ಟ ಹಾಕುವುದಾಗಿ ಎಸ್‌ಐ ತಿಳಿಸಿದ್ದಾರೆ. ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಗೆ ಪೊಲೀಸರಾದ ಸಜೀಶ್, ಹರೀಶ್ ಎಂಬಿವರು ಪಾಲ್ಗೊಂಡಿದ್ದರು.

You cannot copy contents of this page