ಸೆಪ್ಟಿಕ್ ಟ್ಯಾಂಕ್‌ನ ಮಲಿನ ಜಲ ಹೊರಕ್ಕೆ ಕಾಂಪ್ಲೆಕ್ಸ್ ಮಾಲಕನಿಗೆ ದಂಡ

ಕಾಸರಗೋಡು: ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಮಂಜೇಶ್ವರ ಬ್ಲೋಕ್‌ನ ವಿವಿಧ ಪಂಚಾಯತ್‌ಗಳಲ್ಲಿ ನಡೆಸಿದ ತಪಾಸಣೆಯಲ್ಲಿ ವರ್ಕಾಡಿ ಪಂಚಾ ಯತ್‌ನ ಕಾಂಪ್ಲೆಕ್ಸ್‌ವೊಂದರ ಸೆಪ್ಟಿಕ್ ಟ್ಯಾಂಕ್‌ನಿಂದ ಮಲಿನ ಜಲ ಹೊರ ಹರಿಯುತ್ತಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಕ್ವಾರ್ಟರ್ಸ್ ಮಾಲಕನಿಗೆ 10,000 ರೂ. ದಂಡ ಹೇರಲಾಯಿತು. ಸಮೀಪದಲ್ಲೇ ಇರುವ ಇನ್ನೊಂದು ಬಿಲ್ಡಿಂಗ್‌ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿರ್ಲಕ್ಷ್ಯವಾಗಿ ಉಪೇಕ್ಷಿಸಿ, ಸುಟ್ಟು ಹಾಕಿದ್ದ ಹಿನ್ನೆಲೆಯಲ್ಲಿ ದಂಡ ಹೇರಲಾಗಿದೆ. ಮಂಜೇಶ್ವರ ಪಂಚಾಯತ್‌ನ ಹೊಸಂಗಡಿಯಲ್ಲಿರುವ ಸಂಸ್ಥೆಯಿಂದ ನಿಷೇಧಿತ ಫ್ಲೆಕ್ಸ್ ಪ್ರಿಂಟ್‌ಗಳನ್ನು ವಶಪಡಿಸಿ 10 ಸಾವಿರ ರೂ. ಸಂಸ್ಥೆಯ ಮಾಲಕನಿಗೆ ದಂಡ ಹೇರಲಾಗಿದೆ. ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ತಪಾಸಣೆ ನಡೆಸುತ್ತಿದೆ.

RELATED NEWS

You cannot copy contents of this page