ಅಪಾರ್ಟ್ಮೆಂಟ್ನಲ್ಲಿ ಯುವತಿಯ ಸಾವು : ಕೊಲೆ ಎಂದು ಸಾಬೀತು; ಕೊಲೆ ಪ್ರಕರಣ ದಾಖಲು
ಕಾಸರಗೋಡು: ಹೊಸದುರ್ಗ ಬಳಿಯ ಕ್ವಾರ್ಟರ್ಸ್ನಲ್ಲಿ ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾದ ಮೂಲತಃ ಚೆಂಗಳ ನೆಲ್ಲಿಕಟ್ಟೆ ನಿವಾಸಿ ಫಾತಿಮತ್ ಸುಹರಾ (42)ರ ಸಾವು ಕೊಲೆಯಾಗಿ ರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಹೊಸದುರ್ಗ ಪೊಲೀಸರು ತಿಳಿಸಿದ್ದಾರೆ.
ಫಾತಿಮತ್ ಸುಹರಾರ ಮೃತದೇಹ ಜುಲೈ ೨ರಂದು ಹೊಸದುರ್ಗ ನೋರ್ತ್ ಕೋಟಚ್ಚೇರಿಯ ತುಳು ಚ್ಚೇರಿ ರಸ್ತೆಯ ಅವಿಯಿಲ್ ಅಪಾರ್ಟ್ ಮೆಂಟ್ನ ಹೊರಗಿನಿಂದ ಬೀಗ ಜಡಿದ ಕೊಠಡಿಯೊಳಗೆ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೂರು ದಿನಗಳ ಹಿಂದೆ ಅವರು ಸಾವನ್ನಪ್ಪಿದ್ದ ರೆಂದು ಪೊಲೀಸರು ಶಂಕಿಸಿದ್ದಾರೆ. ಬಟ್ಟೆಯಿಂದ ಹೊದಿಸಿ ಆ ಕೊಠಡಿಯ ಒಳಗಿನ ಸೋಫಾದ ಅಡಿಭಾಗದಲ್ಲಿ ಮೃತದೇಹ ಪತ್ತೆಯಾಗಿತ್ತು. ಅಲ್ಲಿ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಗೋಚರಿಸಿತ್ತು. ಸುಹರಾಳ ಸ್ನೇಹಿತೆ ಹೊಸದುರ್ಗ ರೈಲು ನಿಲ್ದಾಣ ಬಳಿ ನಿವಾಸಿ ಶರ್ಮಿಳಾ ಎಂಬಾಕೆ ಮೃತದೇಹ ಪತ್ತೆಯಾಗುವ ಒಂದು ದಿನದ ಹಿಂದೆ ಸುಹರಾರಿಗೆ ಫೋನ್ಕರೆ ಮಾಡಿದ್ದಳು. ಆದರೆ ಫೋನ್ ಕರೆ ಸ್ವೀಕರಿಸದಾಗ ಶರ್ಮಿಳಾ ಮೊನ್ನೆ ಅಪಾರ್ಟ್ಮೆಂಟ್ಗೆ ಬಂದು ನೋಡಿದಾಗ ಕೊಠಡಿಯೊಳಗೆ ಸುಹ ರಾರ ಮೃತದೇಹ ಜೀರ್ಣಿಸಿದ ಸ್ಥಿತಿ ಯಲ್ಲಿ ಪತ್ತೆಯಾಗಿತ್ತು. ಬಳಿಕ ಶರ್ಮಿಳಾ ನೀಡಿದ ಮಾಹಿತಿಯಂತೆ ಹೊಸದುರ್ಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಒಯ್ದು ನಿನ್ನೆ ಮರಣೋತ್ತರ ಪರೀಕ್ಷೆ ಗೊಳಪಡಿಸಲಾಗಿತ್ತು. ಮರ ಣೋತ್ತರ ಪರೀಕ್ಷಾ ವರದಿ ಹೊಸದುರ್ಗ ಪೊಲೀಸರ ಕೈ ಸೇರಿದೆ. ಅದರಲ್ಲಿ ಸುಹರಾರ ಸಾವು ಕೊಲೆಯಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಪೊಲೀಸರು ಕೊಲೆ ಪ್ರಕರಣವನ್ನಾಗಿ ಈಗ ಬದಲಾಯಿಸಿ, ಆ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ.
ಫಾತಿಮತ್ ಸುಹರಾ ಜತೆ ಅದೇ ಕೊಠಡಿಯಲ್ಲಿ ಆಕೆ ಜತೆ ವಾಸಿಸುತ್ತಿದ್ದ ಆಕೆಯ ಪ್ರಿಯತಮನೆಂದು ಹೇಳಲಾಗುತ್ತಿರುವ ಚೆಂಗಳ ರಹಮ್ಮತ್ ನಗರದ ಕನಿಯಡ್ಕ ಹೌಸ್ನ ಅಸೈನಾರ್ (33) ಜುಲೈ ೧ರಂದು ಕಾಸರಗೋಡು ಬಸ್ ನಿಲ್ದಾಣ ಪರಿಸರದ ವಸತಿಗೃಹವೊಂ ದರಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಆತನೇ ಸುಹರಾಳನ್ನು ಕೊಲೆಗೈದಿರಬಹು ದೆಂದೂ, ನಂತರ ಆತ ಅಲ್ಲಿಂದ ಕಾಸರಗೋಡಿಗೆ ಬಂದು ನೇಣಿಗೆ ಶರಣಾಗಿದ್ದನೆಂಬ ನಿಗಮನಕ್ಕೆ ಪೊಲೀಸರು ಬಂದಿದ್ದಾರೆ. ಈ ಪ್ರಕರಣದಲ್ಲಿ ಬೇರೆ ಯಾರಾದರೂ ಶಾಮೀಲಾಗಿರ ಬಹುದೇ ಎಂಬುವುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.