ಕೈಕಂಬ- ಕನ್ಯಾನ ರಸ್ತೆಯಲ್ಲಿ ಚರಂಡಿ ಸಮಸ್ಯೆ: ಪರಿಹಾರಕ್ಕೆ ಡಿಫಿಯಿಂದ ಮನವಿ

ಉಪ್ಪಳ: ಕೈಕಂಬ-ಕನ್ಯಾನ ಅಂತಾರಾಜ್ಯ ರಸ್ತೆಯಲ್ಲಿ ಹಲವು ಕಡೆ ಚರಂಡಿ ಸಮಸ್ಯೆ ಕಂಡು ಬಂದಿದ್ದು, ಇದನ್ನು ಪರಿಹರಿಸಲು ಟೆಂಡರ್ ವಹಿಸಿಕೊಂಡ ಕಂಪೆನಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಮಂಜೇಶ್ವರ ಬ್ಲೋಕ್ ಸಮಿತಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಪಿ.ಎ. ಮುಹಮ್ಮದ್ ರಿಯಾಸ್‌ರಿಗೆ ಮನವಿ ಸಲ್ಲಿಸಿದೆ. ದಿನಂಪ್ರತಿ ನೂರಾರು ವಾಹನಗಳ ಸಹಿತ ಜನರು ಸಂಚರಿಸುವ ಈ ರಸ್ತೆಯಲ್ಲಿ ಚರಂಡಿ ಸೂಕ್ತವಾಗಿಲ್ಲದೆ ನೀರು ರಸ್ತೆಯಲ್ಲಿ ಹರಿದು ಸಮಸ್ಯೆಯಾಗುತ್ತಿದೆ. ಇದನ್ನು ಪರಿಹರಿಸಲು ರಸ್ತೆಯ ದುರಸ್ತಿಗೆ ಗುತ್ತಿಗೆ ವಹಿಸಿಕೊಂಡ ಕಂಪೆನಿ ಸಿದ್ಧವಾಗುವುದಿಲ್ಲವೆಂದು ಡಿವೈಎಫ್‌ಐ ದೂರಿದೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ಕಾರ್ಯದರ್ಶಿ ಅಬ್ದುಲ್ ಹಾರೀಸ್, ಅಧ್ಯಕ್ಷ ವಿನಯ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You cannot copy contents of this page