ಆಯುಷ್ಮಾನ್ ಭಾರತ್ ಯೋಜನೆ: ವಿಮೆ ಮೊತ್ತ 10 ಲಕ್ಷ ರೂ.ಗೇರಿಸುವುದರ ಜತೆ 76 ವರ್ಷ ದಾಟಿದವರಿಗೂ ವಿಸ್ತರಣೆ

ನವದೆಹಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ಸದ್ಯ ಇರುವ ಐದು ಲಕ್ಷ ರೂ. ವಿಮೆ ಮೊತ್ತವನ್ನು 10 ಲಕ್ಷ ರೂಗೇರಿಸಲು ಹಾಗೂ 70 ವರ್ಷ ಮೇಲ್ಪಟ್ಟವರನ್ನು ಈ ವಿಮಾ ಸೌಲಭ್ಯದ ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಇದರ ಹೊರತಾಗಿ ಮುಂದಿನ ಮೂರು ವರ್ಷಗಳಲ್ಲಿ ಈ ವಿಮೆಯ ಫಲಾನುಭವಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಕೇಂದ್ರ ಸರಕಾರ ಹಾಕಿಕೊಂಡಿದೆ. ಜ. 23ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಮಂಡಿಸುವ ಬಜೆಟ್‌ನಲ್ಲಿ ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

ಸದ್ಯ 16ರಿಂದ 59 ವರ್ಷದೊಳಗಿನವರು ಆಯುಷ್ಮಾನ್ ಭಾರತ್‌ನ ಯೋಜನೆಯಡಿ ವಾರ್ಷಿಕ ಐದು ಲಕ್ಷ ರೂ. ಆರೋಗ್ಯ ವಿಮೆ (ಪ್ರತಿ ಕುಟುಂಬಕ್ಕೆ)ಗೆ ಅರ್ಹರಾಗಿದ್ದಾರೆ. 2018ರಲ್ಲಿ ಈ ದರವನ್ನು ನಿಗದಿಪಡಿಸಲಾಗಿದೆ. ಹೆಚ್ಚಾದ ಹಣದುಬ್ಬರ ಹಾಗೂ ಕಸಿ, ಕ್ಯಾನ್ಸರ್‌ನಂತಹ ದುಬಾರಿ ಚಿಕಿತ್ಸೆಗಳಿಗೂ ಅನುಕೂಲಕರ ವಾಗುವ ಈ ಯೋಜನೆಯಲ್ಲಿ ವಿಮೆ ಮೊತ್ತವನ್ನು 70 ವರ್ಷ ಮೀರಿದವರನ್ನು ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸಿದೆ. ಇಂತಹ ಕ್ರಮದಿಂದ ಕೇಂದ್ರ ಬೊಕ್ಕಸಕ್ಕೆ 12076 ಕೋಟಿ ರೂ.ಗಳ ಹೊರೆ ಬೀಳಲಿದೆ. ಫಲಾನುಭವಿಗಳ ಸಂಖ್ಯೆ ದುಪ್ಪಟ್ಟಾದರೆ ದೇಶದ ಮೂರನೇ ಎರಡರಷ್ಟು ಜನಸಂಖ್ಯೆಯು ಈ ಆರೋಗ್ಯ ವಿಮೆ ಯೋಜನೆಗೆ ಒಳಪಟ್ಟಂತಾಗುತ್ತಿದೆ. 70 ವರ್ಷ ಮೇಲ್ಪಟ್ಟ ಸುಮಾರು ಐದು ಕೋಟಿ ಮಂದಿ  ದೇಶದಲ್ಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page