ಎಬಿವಿಪಿ ಕಾರ್ಯಕರ್ತರ ಮೇಲೆ ಹಲ್ಲೆ
ಕಾಸರಗೋಡು: ಪೆರಿಯಾ ಸರಕಾರಿ ಪೋಲಿಟೆಕ್ನಿಕ್ ಕಾಲೇಜಿನ ಎಬಿವಿಪಿ ಕಾರ್ಯ ಕರ್ತರ ಮೇಲೆ ಎಸ್‌ಎಫ್‌ಐ ಕಾರ್ಯಕರ್ತರು ಹಲ್ಲೆ ನಡೆಸಿ ರುವುದಾಗಿ ಬೇಕಲ ಪೊಲೀಸರಿಗೆ ದೂರು ನೀಡಲಾಗಿದೆ. ಎಬಿವಿಪಿ ಯೂನಿಟ್ ಅಧ್ಯಕ್ಷ ತೃತೀಯ ವರ್ಷ ಇಲೆಕ್ಟ್ರೋನಿಕ್ಸ್ ವಿದ್ಯಾರ್ಥಿ ಎಸ್. ಪ್ರಜ್ವಲ್ (20)ನ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಲಾಗಿದ್ದು, ಆತನನ್ನು ಪೆರಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ.
ಕಾಲೇಜಿನಲ್ಲಿ ಎಬಿವಿಪಿ ಘಟಕಕ್ಕೆ ರೂಪು ನೀಡಿರುವ ದ್ವೇಷದಿಂದ ಎಸ್‌ಎಫ್‌ಐ ಕಾರ್ಯಕರ್ತರ ತಂಡ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.