ವಿಳಿಂಞಂ ಅಂತಾರಾಷ್ಟ್ರೀಯ ಬಂದರು ಲೋಕಾರ್ಪಣೆ
ತಿರುವನಂತಪುರ: ತಿರುವನಂತ ಪುರದಲ್ಲಿ ನಿರ್ಮಿಸಲಾದ ಭಾರತದ ಮೊದಲ ಅಂತಾರಾಷ್ಟ್ರೀಯ ಟ್ರಾನ್‌ಶಿಪ್ ಮೆಂಟ್ ಟರ್ಮಿನಲ್ ಬಂದರನ್ನು ಇಂದು ಬೆಳಿಗ್ಗೆ ಲೋಕಾರ್ಪಣೆಗೈಯ್ಯಲಾಯಿತು. ವಿಳಿಂಞದಲ್ಲಿ ಇಂದು ಬೆಳಿಗ್ಗೆ ನಡೆದ ಅದ್ದೂರಿಯ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಂದರನ್ನು ಉದ್ಘಾಟಿಸಿದರು.
ಕೇಂದ್ರ ಬಂದರು, ಮೀನುಗಾರಿಕೆ, ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ರಾಜ್ಯ ಬಂದರು ಸಹಕಾರ, ಮುಜರಾಯಿ ಮಂಡಳಿ ಸಚಿವ ವಿ.ಎನ್.ವಾಸನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಹಲವು ಗಣ್ಯರು ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮೊದಲ ಮದರ್‌ಶಿಪ್‌ಗೂ ಅದ್ದೂರಿ ಯ ಸ್ವಾಗತ ನೀಡಲಾಯಿತು.