ಯೋಗ ಫಾರ್ ಕಿಡ್ಸ್‌ಗೆ ಓವರಾಲ್ ಚಾಂಪ್ಯನ್‌ಶಿಪ್
ಕಾಸರಗೋಡು: ಕಾಞಂಗಾಡ್ ಮೇಲಾಂಗೋಟ್ ಯುಪಿ ಶಾಲೆಯಲ್ಲಿ ಜರಗಿದ ಜಿಲ್ಲಾ ಸ್ಪೋರ್ಟ್ಸ್ ಯೋಗ ಚಾಂಪ್ಯನ್‌ಶಿಪ್‌ನಲ್ಲಿ ಕರಂದಕ್ಕಾಡ್‌ನ ಯೋಗ ಫಾರ್ ಕಿಡ್ಸ್ ಸಂಸ್ಥೆ ಸಮಗ್ರ ಪ್ರಶಸ್ತಿ ಪಡೆದಿದೆ. ಚಾಂಪ್ಯನ್‌ಶಿಪ್‌ನಲ್ಲಿ 13 ಕ್ಲಬ್‌ಗಳಲ್ಲಿ 300 ಮಕ್ಕಳು ಭಾಗವಹಿಸಿದ್ದು, ಯೋಗ ಫಾರ್ ಕಿಡ್ಸ್ 91 ಅಂಕ ಪಡೆದರೆ ತೃಕರಿಪುರದ ಚೇತನ ಯೋಗ ತಂಡ 62 ಅಂಕ ಹಾಗೂ ಕಾಸರಗೋಡಿನ ಅಷ್ಟಾಂಗ ಯೋಗ ಸೆಂಟರ್ 27 ಅಂಕ ಪಡೆದಿದೆ.