42 ಮಹಿಳೆಯರನ್ನು ಕೊಂದು ಮೃತದೇಹಗಳನ್ನು ಕ್ವಾರೆಗೆ ತಳ್ಳಿದ ಸರಣಿ ಕೊಲೆಗಾರ ಸೆರೆ
ನೈರೋಬಿ: ಎರಡು ವರ್ಷದೊಳಗೆ ಪತ್ನಿ ಸಹಿತ ೪೨ ಮಹಿಳೆಯರನ್ನು ಕೊಲೆಗೈದ ಸರಣಿ ಕೊಲೆಗಾರ ಸೆರೆಯಾಗಿದ್ದಾನೆ. ಕೋಲಿನ್ಸ್ ಜುಮೈಸಿ (33)ನನ್ನು ಬಾರ್ನಲ್ಲಿ ಸೆರೆ ಹಿಡಿಯಲಾಗಿದೆ. 2022ರ ಬಳಿಕ ಈತ 42 ಮಹಿಳೆಯರನ್ನು ಕೊಲೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಟ್ಟಕಡೆಯದಾಗಿ ಕಳೆದ ಗುರುವಾರ ಎರಡು ಮಹಿಳೆಯರನ್ನು ಕೊಲೆಗೈದು ನೈರೋಬಿಯಾದಲ್ಲಿರುವ ಮನೆಯ ಸಮೀಪದಲ್ಲಿರುವ ಕ್ವಾರೆಯಲ್ಲಿ ಹಾಕಿರುವುದಾಗಿ ಈತ ಪೊಲೀಸರಿಗೆ ತಿಳಿಸಿದ್ದಾನೆ. ಯುವತಿಯರನ್ನು ಹಲವು ರೀತಿಯಲ್ಲಿ ಕೋಲಿನ್ಸ್ ಜುಮೈಸಿ ವಶೀಕರಿಸಿ ತನ್ನ ವಾಸ ಸ್ಥಳಕ್ಕೆ ಬರುವಂತೆ ಮಾಡಿ ಬಳಿಕ ಮೃಗೀಯವಾಗಿ ಕೊಲೆಗೈದು ಮೃತದೇಹವನ್ನು ತುಂಡುತುಂಡು ಮಾಡಿ ಕ್ವಾರೆಯಲ್ಲಿ ಉಪೇಕ್ಷಿಸುವುದು ಈತನ ಅಪರಾಧದ ರೀತಿಯೆಂದು ಪೊಲೀಸರು ತಿಳಿಸಿದ್ದಾರೆ. ಈತನ ಮನೆಯಿಂದ 10 ಮೊಬೈಲ್ ಫೋನ್, ಲ್ಯಾಪ್ಟಾಪ್ಗಳನ್ನು ಹಾಗೂ ಹಲವಾರು ಗುರುತು ಚೀಟಿಗಳು, ಮಹಿಳೆಯರ ವಸ್ತ್ರಗಳು ಪತ್ತೆಹಚ್ಚಲಾಗಿದೆ. ಮೃತದೇಹಗಳನ್ನು ತುಂಡು ತುಂಡು ಮಾಡಲು ಉಪಯೋಗಿಸಿರುವುದಾಗಿ ಶಂಕಿಸುವ ದೊಡ್ಡ ಕತ್ತಿ ಕೂಡಾ ಪೊಲೀಸರು ಈತನ ಮನೆಯಿಂದ ಪತ್ತೆಹಚ್ಚಿದ್ದಾರೆ. 9 ಮೃತದೇಹ ಗಳನ್ನು ಈತ ಪೊಲೀಸರಿಗೆ ತೋರಿಸಿಕೊಟ್ಟಿದ್ದಾನೆ.
ಸರಣಿ ಕೊಲೆಯ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ಈತನನ್ನು ವಿಚಾರಿಸುತ್ತಿದ್ದಾರೆ. ನಾಪತ್ತೆಯಾದ ಓರ್ವೆ ಮಹಿಳೆಯ ಮೊಬೈಲ್ ಪೋನ್ನಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ಸರಣಿ ಕೊಲೆಗಾರ ಕೋಲಿನ್ಸ್ ಜುಮೈಸಿ ಸೆರೆಯಾಗಿದ್ದಾನೆ.