ಕಾಸರಗೋಡು: ಪಂಜಿಕ್ಕಲ್ಲು ಎಸ್‌ವಿಎಯುಪಿ ಶಾಲೆಯ ಆವರಣ ದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾದ ನವಜಾತ ಶಿಶುವಿನ ಸಂರಕ್ಷಣೆಯನ್ನು ಕಾಸರಗೋಡು ಜಿಲ್ಲಾ ಚೈಲ್ಡ್ ವೆಲ್ಫೇರ್ ಸಮಿತಿ ವಹಿಸಿಕೊಂಡಿದೆ. ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಸಮಿತಿ ಸದಸ್ಯರಾದ ನ್ಯಾಯವಾದಿ ರೇಣುಕಾ ದೇವಿ ತಂಗಚ್ಚಿ, ಅಹಮ್ಮದ್ ಶರಿನ್, ಶ್ರೀಜಿತ್ ಎಂಬಿವರು ಮಗುವಿನ ಸಂರಕ್ಷಣೆಯನ್ನು ವಹಿಸಿಕೊಂಡಿದ್ದಾರೆ. ಅಗತ್ಯದ ಚಿಕಿತ್ಸೆ ನೀಡಿದ ಬಳಿಕ ಮಗುವನ್ನು ಚೇರೂರು ಮೇನಂಗೋಡ್ ನಲ್ಲಿರುವ ಶಿಶು ವಿಕಾಸಭವನದಲ್ಲಿರಿ ಸಲಾಗುವುದು. ಜನರಲ್ ಆಸ್ಪತ್ರೆಯ ಡೆಪ್ಯುಟಿ ಸುಪರಿಂಟೆಂಡೆಂಟ್ ಡಾ| ಜಮಾಲ್ ಅಹಮ್ಮದ್ ಮಗುವಿನ ಆರೋಗ್ಯದ ಬಗ್ಗೆ ಸಮಿತಿ ಸದಸ್ಯ ರೊಂದಿಗೆ ಚರ್ಚೆ ನಡೆಸಿ ಮಗುವನ್ನು ಸಮಿತಿಗೆ ಹಸ್ತಾಂತರಿಸಿದ್ದಾರೆ.
