ಖ್ಯಾತ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ| ಎಂ.ಎಸ್. ವಲ್ಯತ್ತಾನ್ ನಿಧನ

ತಿರುವನಂತಪುರ: ವಿಶ್ವಪ್ರಸಿದ್ಧ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ| ಎಂ.ಎಸ್. ವಲ್ಯತ್ತಾನ್ (90) ನಿಧನ ಹೊಂದಿದರು. ಮಣಿಪಾಲ ಆಸ್ಪತ್ರೆಯಲ್ಲಿ ನಿನ್ನೆ ನಿಧನ ಸಂಭವಿಸಿದೆ. ತಿರುವನಂತಪುರ ಶ್ರೀ ಚಿತ್ತಿರ ತಿರುನಾಳ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ನ ಮೊದಲ ಡೈರೆಕ್ಟರ್ ಆಗಿದ್ದಾರೆ. ತಿರುವನಂತಪುರ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ದರ್ಜೆಯೊಂದಿಗೆ ಪದವಿ ಗಳಿಸಿದ ಅವರು ಬಳಿಕ ಇಂಗ್ಲೆಂಡ್, ಅಮೆರಿಕ ದಲ್ಲಿ ಉನ್ನತ ಶಿಕ್ಷಣ ಕೈಗೊಂಡರು. ಇವರ ನೇತೃತ್ವದಲ್ಲಿ ಶ್ರೀಚಿತ್ರದ ಬಯೋಮೆಡಿಕಲ್ ವಿಭಾಗದಲ್ಲಿ ದೇಶದಲ್ಲೇ ಪ್ರಥಮವಾಗಿ ಕೃತ್ರಿಮ ಹೃದಯ ವಾಲ್ವ್, ಬ್ಲಡ್ ಬ್ಯಾಗ್, ಆಕ್ಸಿಜನೇಟರ್ ಮೊದಲಾದವುಗಳನ್ನು ನಿರ್ಮಿಸಲಾಗಿದೆ. ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

1984ರಲ್ಲಿ ಪದ್ಮಶ್ರೀ, ೨೦೦೫ರಲ್ಲಿ ಪದ್ಮವಿಭೂಷಣ ಲಭಿಸಿದೆ.

You cannot copy contents of this page