ಮಳೆ: ಪ್ರಾಕೃತಿಕ ವಿಕೋಪಕ್ಕೆ ರಾಜ್ಯದಲ್ಲಿ 223 ಮಂದಿ ಬಲಿ

ತಿರುವನಂತಪುರ: ನಿರಂತರವಾಗಿ  ಸುರಿಯುತ್ತಿರುವ ಭಾರೀ ಮಳೆಯಿಂದ ಸೃಷ್ಟಿಯಾದ ಪ್ರಾಕೃತಿಕ ವಿಕೋಪಕ್ಕೆ ರಾಜ್ಯದಲ್ಲಿ ಈತನಕ 223 ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಅದರಿಂದಾಗಿ ಅಲ್ಲಿನ ಸಹಸ್ರಾರು ಮಂದಿಯನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿ ಶೆಡ್‌ಗಳಲ್ಲಿ  ಆಶ್ರಯ ನೀಡಲಾಗಿದೆ. ಭಾರೀ ಮಳೆ ಇನ್ನಷ್ಟು ತೀವ್ರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಹೊಂದಿಕೊಂ ಡು ಅಗತ್ಯದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ. ವಿದ್ಯುತ್ ವಲಯದಲ್ಲಿ ಭಾರೀ ನಾಶನಷ್ಟ ಮತ್ತು ಅಡಚಣೆಗಳು ಉಂಟಾಗಿದೆ.  ಸುದ್ದಿ ವಿನಿಮಯ ಸಂಪರ್ಕಗಳೂ ಈಗ ಹದಗೆಡತೊಡಗಿದೆ. ಸಾರಿಗೆ  ಕ್ಷೇತ್ರ ದಲ್ಲೂ ಭಾರೀ ಅಡಚಣೆ ಎದುರಿಸ ಬೇ ಕಾಗಿ ಬಂದಿದೆ. ಇದರಿಂದಾಗಿ ರಾಜ್ಯದ ಹಲವೆಡೆಗಳಿಗೆ ಆವಶ್ಯಕ ಸಾಮಗ್ರಿಗಳನ್ನು ಪೂರೈಸುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆಯೆಂದು ಮುಖ್ಯಮಂತ್ರಿ ಹೇಳಿದ್ದಾರೆ.

ಪ್ರಕೃತಿ ವಿಕೋಪಕ್ಕೆ ಸಿಲುಕಿದವರಿಗೆ ಅಗತ್ಯದ ಸಹಾಯ ಒದಗಿಸಲು ಕೇಂದ್ರ ಸರಕಾರ 600 ಕೋಟಿ ರೂ.ಗಳ ತುರ್ತು ಸಹಾಯವನ್ನು ಕೇರಳಕ್ಕೆ ಮಂಜೂರು ಮಾಡಿದೆ.  ಪ್ರಾಕೃತಿಕ ವಿಕೋಪದ ರಕ್ಷಣಾ ಕಾರ್ಯಾಚರಣೆಗಾಗಿ  ಅಗತ್ಯದ ಉಪಕರಣಗಳು ಹಾಗೂ ಇತರ ಸಾಮಗ್ರಿಗಳಿಗೆ ಕಸ್ಟಮ್ಸ್ ಸುಂಕ ಮತ್ತು ಜಿಎಸ್‌ಟಿಯಲ್ಲಿ ರಿಯಾಯಿತಿ ನೀಡಲಾಗಿದೆ. ಮಾತ್ರವಲ್ಲ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಗೆ  ರಿಲಯನ್ಸ್ ಫೌಂಡೇಶನ್ ೨೧ ಕೋಟಿ ರೂ. ಹಾಗೂ 50 ಕೋಟಿ ರೂ.ಗಳ ರಕ್ಷಣಾ ಸಾಮಗ್ರಿಗಳನ್ನು ನೀಡುವ ಭರವಸೆಯನ್ನು ನೀಡಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡು, ಕಣ್ಣೂರು, ವಯನಾಡು ಜಿಲ್ಲೆಗಳ ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಆದರೆ ಪರೀಕ್ಷಾ ದಿನಾಂಕಗಳಲ್ಲಿ ಯಾವುದೇ ರೀತಿಯ ಬದಲಾವಣೆ ತರಲಾಗಿಲ್ಲ. ತೀವ್ರ ಮಳೆ ಹಿನ್ನೆಲೆಯಲ್ಲಿ  ರಾಜ್ಯಾದ್ಯಂತ  ಜಾಗ್ರತಾ ನಿರ್ದೇಶ ನೀಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page