ಪೊಲೀಸ್ ಠಾಣೆ ಬಳಿ ರಸ್ತೆಗೆ ಬಿದ್ದ ಮರ: ಆವರಣಗೋಡೆ ಕುಸಿತ

ಕಾಸರಗೋಡು: ಕಾಸರಗೋಡು ನಗರ ಪೊಲೀಸ್ ಠಾಣೆ ಸಮೀಪವಿದ್ದ ಮರವೊಂದು ಇಂದು ಬೆಳಿಗ್ಗೆ ಮಗುಚಿ ಬಿದ್ದಿದ್ದು, ಇದರಿಂದ ಆವರಣಗೋಡೆ ಕುಸಿದು ಬಿದ್ದಿದೆ. ಇಂದು ಬೆಳಿಗ್ಗೆ ೧೦ ಗಂಟೆ ವೇಳೆ ಬೀಸಿದ ಗಾಳಿ ವೇಳೆ ಮರ ಮಗುಚಿ ಬಿದ್ದಿದೆ. ಇದರಿಂದ ರಸ್ತೆಯಲ್ಲಿ ಅಲ್ಪ ಹೊತ್ತು ಸಾರಿಗೆ ಅಡಚಣೆ ಉಂಟಾಯಿತು. ಬಳಿಕ ಅಗ್ನಿಶಾಮಕ ದಳ ತಲುಪಿ ಮರವನ್ನು ತೆರವುಗೊಳಿಸಿತು. ಶಾಲಾ ಮಕ್ಕಳ ಸಹಿತ ಹಲವು ಮಂದಿ ನಡೆದು ಹೋಗುವ ರಸ್ತೆಗೆ ಮರ ಬಿದ್ದಿದೆ. ಇಂದು ಶಾಲೆಗೆ ರಜೆಯಾದುದರಿಂದ ರಸ್ತೆಯಲ್ಲಿ ಜನಸಂಚಾರ ಕಡಿಮೆಯಾಗಿತ್ತು. ಇದರಿಂದ ಭಾರೀ ಅಪಾಯ ತಪ್ಪಿದೆ.

You cannot copy contents of this page