ನಗರಗಳನ್ನು ಕೇಂದ್ರೀಕರಿಸಿ ಕಳವಿಗೆ ಭಾರೀ ಸ್ಕೆಚ್: ಕಾಸರಗೋಡಿನ 9 ಮಂದಿ ಸಹಿತ 11 ಮಂದಿ ಸೆರೆ
ಕಾಸರಗೋಡು: ನಗರಗಳನ್ನು ಕೇಂದ್ರೀಕರಿಸಿ ಕಳವಿಗೆ ಸ್ಕೆಚ್ ಹಾಕಿಕೊಂಡಿದ್ದ ಕಾಸರಗೋಡಿನ 9 ಮಂದಿ ಸೇರಿ 11 ಮಂದಿಯನ್ನು ಕೊಯಂಬತ್ತೂರಿನಿಂದ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಕಣ್ಣೂರಿನ ತಡಿಯಂಡೆ ವೀಡ್ ನಸೀರ್ನ ಸಹೋದರ ಕಣ್ಣೂರು ತಯ್ಯಿಲ್ ನಿವಾಸಿ ಎಂ. ಶಮಾಲ್ (46), ಹೊಸದುರ್ಗ ಚೆಟ್ಟಿಕುಂಡು ಕಡವತ್ತ್ ವೀಟಿಲ್ ಮೊಹಮ್ಮದ್ ನಿಯಾಸುದ್ದೀನ್ (40), ಹೊಸದುರ್ಗ ಕೋಳಾವಯಲ್ನ ಸುನಿಲ್ (45), ಹೊಸದುರ್ಗ ತೆಕ್ಕೇಪುರದ ಸಮೀರ್ (32), ತೃಕ್ಕರಿಪುರ ಮಂಗಳಂ ಗಣಪತಿ ಪಾಳಯಂನ ಫರ್ಸಾದ್ (25), ಅನಸ್ಸ್ (25), ಉಕ್ಕಟ್ಟಂ ವಿನ್ಸೆಂಟ್ ರಸ್ತೆಯ ಮೊಹಮ್ಮದ್ ಅನಸ್ (29), ತೃಕರಿಪುರ ಮಂಗಳಂ ಪೆರಿಯಾ ಪಳ್ಳಿವಾಸಲ್ ನಿವಾಸಿಗಳಾದ ಸಲೀಂ ಮಾಲಿಕ್ (25), ಶಾಜಹಾನ್ (26), ತೃಕರಿಪುರ ಕಕ್ಕಯಂ ನಿವಾಸಿ ಮೊಹಮ್ಮದ್ ಯಾಸಿನ್ (18), ಕಣ್ಣೂರು ವಾರ್ಳವೀಥಿ ತಾಕಯತ್ ಅಬ್ದುಲ್ ಹಲೀಂ (47) ಮತ್ತು ಕರ್ನಾಟಕ ಭಟ್ಕಳ ನಿವಾಸಿ ನೌಫಲ್ ಖಾಸಿಂ ಶೇಖ್ (29) ಬಂಧಿತರಾದ ಆರೋಪಿಗಳು.
ಕೊಯಂಬತ್ತೂರಿನ ಕೂವ್ವೆ ಪುತುರಿಯ ಮನೆಯೊಂದರಲ್ಲಿ ಈ 11 ಮಂದಿ ಠಿಕಾಣಿ ಹೂಡಿದ್ದರೆಂದೂ ಶಂಕೆಗೊಂಡ ಅಲ್ಲಿನ ಕುನಿಯಾಮುತ್ತೂರು ಪೊಲೀಸರು, ಅವರನ್ನು ವಶಕ್ಕೆ ತೆಗೆದುಕಂಡು ತೀವ್ರ ವಿಚಾರಣೆ ಗೊಳಪಡಿಸಿದಾಗ ಈ ತಂಡ ಆ ಮನೆಯಲ್ಲಿ ಕಳವಿಗೆ ಭಾರೀ ಹೊಂಚು ಹಾಕುತ್ತಿದ್ದರೆಂಬ ಮಾಹಿತಿ ಲಭಿಸಿದೆ ಎಂದು ಅಲ್ಲಿನ ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರ ಪೈಕಿ 9 ಮಂದಿಯನ್ನು ಪೊಲೀಸರು ಅಲ್ಲಿನ ನ್ಯಾಯಾಲಯ ದಲ್ಲಿ ಹಾಜರುಪಡಿಸಿದ್ದಾರೆ. ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾ ಗಿದೆ. ಬಾಕಿ ಮೂವರನ್ನು ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.