ತ್ಯಾಜ್ಯ ಸಮಸ್ಯೆ: ವಿವಿಧ ಸಂಸ್ಥೆಗಳಿಂದ ಎನ್‌ಪೋರ್ಸ್‌ಮೆಂಟ್ ದಂಡ ವಸೂಲಿ

ಕಾಸರಗೋಡು: ಸ್ಥಳೀಯಾಡಳಿತ ವಿಭಾಗದ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ನಡೆಸಿದ ತಪಾಸಣೆಯಲ್ಲಿ ಚಟ್ಟಂಚಾಲ್ ಸಭಾಂಗಣದಲ್ಲಿ ಕಾರ್ಯಕ್ರಮಗಳಿಗೆ ನಿಷೇಧಿತ ಪ್ಲೇಟ್‌ಗಳು, ಗ್ಲಾಸ್‌ಗಳನ್ನು ಉಪಯೋಗಿಸಿರುವುದು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಮಾಲಕನಿಗೆ 10 ಸಾವಿರ ರೂ. ದಂಡ ಹೇರಲಾಗಿದೆ. ಸರ್ವೀಸ್ ಸೆಂಟರ್‌ನಿಂದ ಉಪಯೋಗಿಸಿದ ನೀರನ್ನು ಸಾರ್ವಜನಿಕ ಪ್ರದೇಶಕ್ಕೆ  ಹರಿಯಬಿಟ್ಟ ಹಿನ್ನೆಲೆಯಲ್ಲಿ ಸರ್ವೀಸ್ ಸ್ಟೇಶನ್ ಮಾಲಕನಿಂದ 5 ಸಾವಿರ  ರೂ. ತಕ್ಷಣ ದಂಡ ವಸೂಲು ಮಾಡಲಾಗಿದೆ. ತ್ಯಾಜ್ಯ ನೀರು ನಿರ್ಲಕ್ಷ್ಯವಾಗಿ ಉಪೇಕ್ಷಿಸಿರುವುದಕ್ಕೆ ಪರಂಬದ ಅಪಾರ್ಟ್‌ಮೆಂಟ್‌ನಿಂದ ೫ ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಕಾಞಂಗಾಡ್ ನಗರಸಭಾ ವ್ಯಾಪ್ತಿಯ ಕ್ವಾರ್ಟರ್ಸ್‌ಗಳಲ್ಲಿ  ತ್ಯಾಜ್ಯವನ್ನು ಉರಿಸಿದ  ಹಿನ್ನೆಲೆಯಲ್ಲಿ ೫ ಸಾವಿರ ರೂ. ವಿವಿಧ ಇಲಾಖೆಗಳ ಪ್ರಕಾರ ದಂಡ ವಸೂಲಿ ಮಾಡಲಾಗಿದೆ.  ತಪಾಸಣೆ ತಂಡದಲ್ಲಿ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ. ಮುಹಮ್ಮದ್ ಮದನಿ, ಇ.ಕೆ. ಫಾಸಿಲ್, ಟಿ.ಕೆ. ಇಕ್ಭಾಲ್, ಕೆ. ಶಿಜು ಭಾಗವಹಿಸಿದರು.

You cannot copy contents of this page