ಪ್ರಿಯತಮನೊಂದಿಗೆ ಗೃಹಿಣಿ ಪರಾರಿ
ಹೊಸದುರ್ಗ: ತವರು ಮನೆಗೆ ತೆರಳುವುದಾಗಿ ತಿಳಿಸಿ ಪತಿ ಮನೆಯಿಂದ ಹೊರಟ ಗೃಹಿಣಿ ಪ್ರಿಯತಮನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಅಂಬಲತ್ತರ ಮುಟ್ಟಿಚರಲಿಲ್ ನಲ್ಲಿ ಪತಿ ಹಾಗೂ ಪುತ್ರನೊಂದಿಗೆ ವಾಸಿಸುತ್ತಿದ್ದ ಪರಿಯಾರಂ ಆರ್ತಿಪರಂಬ ನಿವಾಸಿಯಾದ ೩೬ರ ಹರೆಯದ ಯುವತಿ ತಿರುವನಂತಪುರ ನಿವಾಸಿಯಾದ ೩೦ರ ಹರೆಯದ ಯುವಕ ನೊಂದಿಗೆ ಪರಾರಿಯಾಗಿರು ವುದು. ಈ ಬಗ್ಗೆ ತಂದೆ ನೀಡಿದ ದೂರಿನಂತೆ ಪರಿಯಾರಂ ಪೊಲೀಸ್ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಓಣಂನ ಮೊದಲ ದಿನ ಯುವತಿ ಪತಿ ಗೃಹದಿಂದ ತವರು ಮನೆಗೆ ತೆರಳುವುದಾಗಿ ತಿಳಿಸಿ ಹೊರಟಿದ್ದಳು. ಮನೆಗೆ ತಲುಪದ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯಲ್ಲಿ ಯುವತಿ ಪ್ರಿಯ ತಮನ ಜೊತೆ ಪರಾ ರಿಯಾಗಿರು ವುದಾಗಿ ತಿಳಿದು ಬಂದಿದೆ.
ಮುಖ್ಯಮಂತ್ರಿಗೆ ಹೆಲಿಕಾಫ್ಟರ್ : ೨೦ ತಾಸು ಹಾರಲು ೮೦ ಲಕ್ಷ ರೂ. ಬಾಡಿಗೆ
ತಿರುವನಂತಪುರ: ರಾಜ್ಯ ಸರಕಾರದ ವಿವಿಧ ಅಗತ್ಯಕ್ಕಾಗಿ ಬಾಡಿಗೆಗೆ ಹೆಲಿಕಾಫ್ಟರ್ ಪಡೆಯಲು ಸರಕಾರ ತೀರ್ಮಾನಿಸಿದ್ದು ಇದು ಇನ್ನೊಂದೆಡೆ ಭಾರೀ ವಿವಾದಗಳಿಗೂ ದಾರಿಮಾಡಿಕೊಟ್ಟಿದೆ.
ತಿಂಗಳಿಗೆ ೨೦ ತಾಸುಗಳ ಹಾರಾಟ ನಡೆಸಲು ಹೆಲಿಕಾಫ್ಟರ್‌ಗೆ ಬಾಡಿಗೆ ರೂಪದಲ್ಲಿ ೮೦ ಲಕ್ಷ ರೂ. ನೀಡಬೇಕಾಗಿದೆ. ಆದರೆ ರಾಜ್ಯ ಸರಕಾರ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ ವೇಳೆಯಲ್ಲೇ ಹೆಲಿಕಾಫ್ಟ ರ್‌ನ್ನು ಬಾಡಿಗೆಗೆ ಪಡೆಯುವ ಅಗತ್ಯವಾದರೂ ಏನು ಮತ್ತು ಇಷ್ಟು ದುಂದುವೆಚ್ಚ ವಲ್ಲವೇ ಎಂದು ವಿಪಕ್ಷ ಗಳು ಪ್ರಶ್ನಿಸಿದೆ. ಬಾಡಿಗೆ ಹೆಲಿಕಾಫ್ಟರ್ ಪಡೆಯುವ ಒಡಂಬಡಿಕೆಗೆ ಮುಂದಿನ ವಾರ ಸಹಿ ಹಾಕಲಾಗುವುದು. ದಿಲ್ಲಿಯನ್ನು ಕೇಂದ್ರವನ್ನಾಗಿ ಕಾರ್ಯವೆಸಗುತ್ತಿರುವ ಚಿಪ್ಸನ್ ಯೇವಿಯೇಶನ್ ಎಂಬ ಖಾಸಗಿ ಸಂಸ್ಥೆಯೊಂದರ ಹೆಲಿಕಾಫ್ಟರ್‌ನ್ನು ಬಾಡಿಗೆಗೆ ಪಡೆದುಕೊಳ್ಳಲಾಗುವುದು. ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡ ತೀರ್ಮಾನದಂತೆ ಬಾಡಿಗೆಗೆ ಹೆಲಿಕಾಫ್ಟರ್ ಪಡೆಯಲಾಗುತ್ತಿದೆ. ಹೆಲಿಕಾಫ್ಟರ್ ಬಂದಿಳಿಯಲು ಅಗತ್ಯದ ಹೆಲಿಪ್ಯಾಡ್‌ಗಳನ್ನು ಈಗ ನಿರ್ಮಿಸಲಾಗುತ್ತಿದೆ.