ಶಿರೂರಿನ ಹೊಳೆಯಲ್ಲಿ ಲಾರಿ ಸಿಲುಕಿಕೊಂಡ ಸ್ಥಳ ಪತ್ತೆಹಚ್ಚಿರುವುದು ಕಾಸರಗೋಡು ನಿವಾಸಿ

ಕಾಸರಗೋಡು: ಕರ್ನಾಟಕದ ಅಂಕೋಲ ಸಮೀಪ ಶಿರೂರಿನಲ್ಲಿ  ಭೂ ಕುಸಿತ ಸಂದರ್ಭದಲ್ಲಿ  ದುರ್ಘಟ ನೆಗೀಡಾದ ಕಲ್ಲಿಕೋಟೆ ನಿವಾಸಿ ಅರ್ಜುನ್ ಚಲಾಯಿಸುತ್ತಿದ್ದ ಲಾರಿ  ಹೊಳೆಯಲ್ಲಿ ಸಿಲುಕಿಕೊಂಡಿ ರುವುದನ್ನು ಪತ್ತೆಹಚ್ಚಿರುವುದು ಕಾಸರಗೋಡು ಜಿಲ್ಲೆಯ ಕಯ್ಯೂರು ನಿವಾಸಿಯಾಗಿ ದ್ದಾರೆ. ಕಯ್ಯೂರು ಮುಳಕ್ಕೋತ್ ನಿವಾಸಿಯೂ, ಸುರತ್ಕಲ್ ಎನ್‌ಐಟಿಕೆಯ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ. ಶ್ರೀವತ್ಸ ಕೊಳತ್ತಾಯರು ಭೂಕುಸಿತವುಂಟಾಗಿ ಕಲ್ಲುಮಣ್ಣು ತುಂಬಿಕೊಂಡಿರುವ ಪ್ರದೇಶವನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಿ ಲಾರಿಯ ಇರುವಿಕೆಯನ್ನು ಪತ್ತೆಹಚ್ಚಿದ್ದಾರೆ. ರಾಷ್ಟ್ರೀಯ ದುರಂತ ನಿವಾರಣಾ ಸೇನೆ ಅಥೋರಿಟಿಯ ವಿನಂತಿ ಮೇರೆಗೆ ಇವರು ಶಿರೂರಿಗೆ ತಲುಪಿದ್ದರು. ಇದಲ್ಲದೆ ಕಳೆದವರ್ಷ ಪೆರಿಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವೇಳೆ ಮೇಲ್ಸೇತುವೆ ಕುಸಿದಾಗ ಆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ನೇಮಿಸಲಾದ ತಂಡದಲ್ಲೂ ಶ್ರೀವತ್ಸ ಕೊಳತ್ತಾಯರು ಇದ್ದರು. ಡಾ. ಶ್ರೀವತ್ಸ ಐದು ಪುಸ್ತಕಗಳನ್ನು ಬರೆದಿದ್ದಾರೆ. ೮೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ವಿವಿಧ ಮ್ಯಾಗಸಿನ್‌ಗಳಲ್ಲಿ ಪ್ರಕಟಿಸಿದ್ದಾರೆ. ಪ್ರಸ್ತುತ ಇಂಟರ್ ನೇಶನಲ್ ಅಸೋಸಿಯೇಶನ್ ಫಾರ್ ಕೋಸ್ಟಲ್ ರಿಸರ್ವೋಯರ್ ರಿಸರ್ಚ್ (ಐಎಸಿಆರ್‌ಆರ್) ಕಾರ್ಯದರ್ಶಿ ಭಾರತೀಯ ಚಾಪ್ಟರ್, ಇಂಡ್ಯನ್ ಸೊಸೈಟಿ ಆಫ್ ಅರ್ತ್ ಕ್ವಿಕ್ ಟೆಕ್ನೋಲಜಿಯ ಎಕ್ಸಿಕ್ಯೂಟಿವ್ ಕಮಿಟಿಯ ಸದಸ್ಯನಾಗಿದ್ದಾರೆ.  ಮುಳಕ್ಕೋಂ ಅರಯಾಲ್‌ನ ಬಾಲಕೃಷ್ಣ ಕೊಳತ್ತಾಯ-ಶಾರದಾ ಅಂತರ್ಜನ ದಂಪತಿಯ ಪುತ್ರನಾಗಿದ್ದಾರೆ.

RELATED NEWS

You cannot copy contents of this page