ಕೇಂದ್ರ ಬಜೆಟ್: ವಿವಿಧ ಕಡೆಗಳಲ್ಲಿ ಯೂತ್ ಕಾಂಗ್ರೆಸ್‌ನಿಂದ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರಕಾರ ಮುಂಗಡ ಪತ್ರದಲ್ಲಿ ಕೇರಳವನ್ನು ಅವಗಣಿಸಲಾಗಿದೆ ಎಂದು ಆರೋಪಿಸಿ ಯೂತ್ ಕಾಂಗ್ರೆಸ್‌ನ ವಿವಿಧ ಘಟಕಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಹಣಕಾಸು ಸಚಿವೆಗೆ ಕೇರಳ ಭೂಪಟವನ್ನು ಕಳುಹಿಸಿ ಕೊಡಲಾಗಿದೆ.

‘ಕೇರಳ ಭಾರತದಲ್ಲಿದೆ ಮೇಡಂ’ ಎಂಬ ಹೆಸರಲ್ಲಿ ಎಣ್ಮಕಜೆ ಮಂಡಲ ಯೂತ್ ಕಾಂಗ್ರೆಸ್ ಸಮಿತಿ ಸೆಲ್ ಅಂಚೆ ಕಚೇರಿಯಿಂದ ಭೂಪಟ ಕಳುಹಿಸುವ ಕಾರ್ಯಕ್ರಮವನ್ನು ಮಂಡಲ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪಿ.ಎಂ.ರ ಅಧ್ಯಕ್ಷತೆಯಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಬಾಲಕೃಷ್ಣ ಕುಲಾಲ್ ನಲ್ಕ, ಶರೀಫ್ ಪೆರ್ಲ, ಆಸಿಫ್ ಬಣ್ಪುತ್ತಡ್ಕ, ಹನೀಫ್ ಕಾಟುಕುಕ್ಕೆ, ಜಬ್ಬಾರ್ ನಲ್ಕ ಮಾತನಾಡಿದರು.

ಮೀಂಜ ಮಂಡಲ ಸಮಿತಿಯಿಂದ ಮೀಯಪದವು ಅಂಚೆ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯನ್ನು ಮಂಡಲ ಅಧ್ಯಕ್ಷ ಬಾತಿಷ್ ಅಹಮ್ಮದ್‌ರ ಅಧ್ಯಕ್ಷತೆಯಲ್ಲಿ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಜಗದೀಶ್ ಮೂಡಂಬೈಲು, ಬಿ.ಕೆ. ಮೊಹಮ್ಮದ್, ಜಿ. ರಾಮ ಭಟ್, ಹಮೀದ್ ಕಣಿಯೂರು, ಕಾಯಿಂಞಿ ಹಾಜಿ ತಲೇಕಳ, ಜೆ. ಮೊಹಮ್ಮದ್, ಸಿರಾಜುದ್ದೀನ್ ತಂಙಳ್, ಅಬೂಬಕರ್ ಪೊಯ್ಯೆ, ಡೆನ್ನಿಸ್ ಡಿ’ಸೋಜಾ, ಉಮ್ಮರ್ ಬೆಜ್ಜ, ಶೇಕ್ ಅಬ್ಬಾಸ್, ಅಬೂಸಾಲಿ, ಬಶೀರ್ ಬೆಜ್ಜ, ಜಿಯಾ, ಇರ್ಫಾನ್ ಕಣಿಯೂರು, ಅಶ್ಫಲ್ ಭಾಗವಹಿಸಿದರು.

ವರ್ಕಾಡಿ ಮಂಡಲ ಯೂತ್ ಕಾಂಗ್ರೆಸ್ ಸಮಿತಿ ವತಿಯಿಂದ ವರ್ಕಾಡಿ ಅಂಚೆ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯನ್ನು ಸಮಿತಿ ಅಧ್ಯಕ್ಷೆ ಶರ್ಮಿಳಾ ಪಿಂಟೋರ ಅಧ್ಯಕ್ಷತೆಯಲ್ಲಿ ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಉದ್ಘಾಟಿಸಿದರು. ಅಬೂಸಾಲಿ ಗಾಂಧೀನಗರ, ಮೊಹಮ್ಮದ್ ಮಜಾಲ್, ಎಸ್. ಅಬ್ದುಲ್ ಖಾದರ್ ಹಾಜಿ, ಸದಾಶಿವ ಕೆ., ಶೈಲಜಾ ಕಳಿಯೂರು, ವಿನೋದ್ ಕುಮಾರ್, ರೆಜತ್ ವೇಗಸ್, ಬಿ.ಕೆ. ಮೊಹಮ್ಮದ್, ರಾಬಿಯ ವರ್ಕಾಡಿ, ಫಿಲೋಮಿನಾ ಮೊಂತೇರೋ, ರಾಜೇಶ್ ಡಿ’ಸೋಜಾ, ಸಹದ್ ಅಬ್ದುಲ್ ಖಾದರ್, ಶಕೀಲ್ ಅಹ್ಮದ್ ಉಪಸ್ಥಿತರಿದ್ದರು.

RELATED NEWS

You cannot copy contents of this page