ಯುವಕ ನಾಪತ್ತೆ
ಕುಂಬಳೆ: ಯುವಕನೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಪೇರಾಲ್ ಕಣ್ಣೂರಿನ ರಾಮ ಎಂಬವರ ಪುತ್ರ ಹರೀಶ್ (42) ಈ ತಿಂಗಳ 27ರಿಂದ ನಾಪತ್ತೆಯಾಗಿ ದ್ದಾರೆಂದು ತಿಳಿಸಲಾಗಿದೆ. ಕೂಲಿ ಕಾರ್ಮಿಕನಾದ ಇವರು ಅಂದು ಬೆಳಿಗ್ಗೆ ಕೆಲಸಕ್ಕೆಂದು ತಿಳಿಸಿ ಹೋಗಿದ್ದು ಅನಂತರ ಮರಳಿ ಮನೆಗೆ ಬಂದಿಲ್ಲ ಎನ್ನಲಾಗುತ್ತಿದೆ. ವಿವಿಧೆಡೆ ಹುಡುಕಾ ಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ಸಹೋದರ ಸತೀಶ್ ನಿನ್ನೆ ಕುಂ ಬಳೆ ಪೊಲೀಸರಿಗೆ ದೂರು ನೀಡಿ ದ್ದಾರೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.