ಮೈಲಾಟಿ ನಿವಾಸಿಯ ಹಣ, ಚಿನ್ನಾಭರಣ ಲಪಟಾವಣೆ: ಚೆಮ್ನಾಡ್ ನಿವಾಸಿ ಯುವತಿ ವಿರುದ್ಧ ಇನ್ನೊಂದು ಕೇಸು
ಕಾಸರಗೋಡು: ಐಎಸ್ಆರ್ಒ ಉದ್ಯೋಗಸ್ಥೆಯೆಂದು ಸುಳ್ಳು ಹೇಳಿ ಹಲವರಿಂದ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣಗಳನ್ನು ಲಪಟಾಯಿಸಿದ ಚೆಮ್ನಾಡ್ ಕೊಂಬನಡ್ಕದ ಶ್ರುತಿ ಚಂದ್ರಶೇಖರನ್ (35) ಎಂಬಾಕೆ ವಿರುದ್ಧ ಪೊಲೀಸರು ಇನ್ನೊಂದು ಕೇಸು ದಾಖಲಿಸಿಕೊಂ ಡಿದ್ದಾರೆ. ಮೈಲಾಟಿ ಕಿಳಕ್ಕೇಕರದ ದೇವಿದಾಸ್ ಎಂಬವರ ದೂರಿನಂತೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ. 73 ಸಾವಿರ ರೂಪಾಯಿ ಹಾಗೂ 83.81 ಗ್ರಾಂ ಚಿನ್ನಾಭರಣವನ್ನು ಪಡೆದು ಮರಳಿ ನೀಡದೆ ಈಕೆ ವಂಚಿಸಿರುವುದಾಗಿ ದೇವಿದಾಸ್ ದೂರಿದ್ದಾರೆ. ಜಿಮ್ನೇಶಿ ಯಂನಲ್ಲಿ ಪರಿಚಯಗೊಂಡ ಯುವಕ ನೊಂದಿಗೆ ಸ್ನೇಹ ನಟಿಸಿ ಆತನಿಂದ ಹಣ ಹಾಗೂ ಚಿನ್ನಾಭರಣವನ್ನು ಲಪಟಾ ಯಿಸಲಾಯಿತೆಂಬ ಪ್ರಕರಣ ದಲ್ಲಿ ಶ್ರುತಿಯನ್ನು ಕೆಲವು ದಿನಗಳ ಹಿಂದೆ ಮೇಲ್ಪರಂಬ ಪೊಲೀಸರು ಕರ್ನಾಟ ಕದ ಉಡುಪಿಯ ಲಾಡ್ಜ್ನಿಂದ ಸೆರೆಹಿಡಿದಿದ್ದರು. ಯುವತಿ ಇದೀಗ ರಿಮಾಂಡ್ನಲಿ ದ್ದಾಳ. ಇದರ ಬೆನ್ನಲ್ಲೇ ದೇವಿದಾಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರ್ಥಿಕವಾಗಿ ಭಾರೀ ಸಮಸ್ಯೆಯ ಲ್ಲಿದ್ದೇನೆಂದೂ ಅದ್ದರಿಂದ ಹಣ ನೀಡಿ ಸಹಕರಿಸಬೇಕೆಂದು ತಿಳಿಸಿ ಶ್ರುತಿ ಸ್ನೇಹಿತರಿಂದ ಚಿನ್ನಾಭರಣ ಹಾಗೂ ಹಣವನ್ನು ಪಡೆದುಕೊಂ ಡಿರುವು ದಾಗಿ ಪೊಲೀಸರು ತಿಳಿಸಿದ್ದಾರೆ. ನೀಡಿದ ಹಣ ಹಾಗೂ ಚಿನ್ನಾಭರಣ ವನ್ನು ಮರಳಿ ಕೇಳಿದರೆ ಪೊಲೀಸರಿಗೆ ದೂರು ನೀಡುವುದಾಗಿ ಶ್ರುತಿ ಬೆದರಿಕೆ ಯೊಡುತ್ತಿದ್ದಳೆಂದು ಪೊಲೀಸರು ಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಮೆಟ್ರಿಮೋನಿಯಲ್ ವೆಬ್ಸೈಟ್ ಮೂಲಕ ಹಲವು ಯುವಕರನ್ನು ಈಕೆ ಬಲೆಗೆ ಬೀಳಿಸಿರುವುದಾಗಿ ತಿಳಿದುಬಂದಿದೆ. ಶ್ರುತಿ ನಡೆಸಿದ ವಂಚನೆಯಲ್ಲಿ ಕೆಲವು ಅಧಿಕಾರಿಗಳು ಸಿಲುಕಿದ್ದಾರೆಂದು ಹೇಳಲಾಗುತ್ತಿದೆ. ಆದರೆ ನಾಚಿಕೆ ಹಾಗೂ ಉದ್ಯೋಗ ಕಳೆದುಕೊಳ್ಳ ಬೇಕಾಗಿ ಬರಲಿದೆಯೆಂಬ ಭಯದಿಂದ ಯಾರು ಕೂಡಾ ದೂರು ನೀಡಲು ಸಿದ್ಧರಾಗಿಲ್ಲವೆಂದು ಹೇಳಲಾಗುತ್ತಿದೆ.