ಕಾಸರಗೋಡು: ಕಾಲಿಚ್ಚನಡ್ಕ ನಿವಾಸಿ ರಾಜಸ್ಥಾನದಲ್ಲಿ ಸಂಭವಿಸಿದ ಅಪಘಾತ ದಲ್ಲಿ ಮೃತಪಟ್ಟಿದ್ದಾರೆ. ಅಟ್ಟಕಂಡ ತೆಕ್ಕೇಲ್ ವೀಟಿಲ್ ಸಾವಿಯೋ ಮ್ಯಾಥ್ಯು (೪೦) ಮೃತ ವ್ಯಕ್ತಿ. ರಾಜಸ್ಥಾನದ ಶಿರೋಹಿ ಜಿಲ್ಲೆಯ ಶಿರೋಗಂಜ್ ಠಾಣೆ ವ್ಯಾಪ್ತಿ ಯಲ್ಲಿರುವ ಕೆಲಸ ಸ್ಥಳದಲ್ಲಿ ಮೊನ್ನೆ ರಾತ್ರಿ ಅಪಘಾತ ಸಂಭವಿಸಿರುವುದಾಗಿ ತಿಳಿದು ಬಂದಿದೆ. ತೈಲ ಕಂಪೆನಿಯೊಂ ದರಲ್ಲಿ ಸಾವಿಯೋ ಮ್ಯಾಥ್ಯು ಕೆಲಸ ನಿರ್ವಹಿ ಸುತ್ತಿದ್ದರು. ಮ್ಯಾಥ್ಯು ತೆಕ್ಕೇಲ್- ಮೆರ್ಸಿ ಮ್ಯಾಥ್ಯು ದಂಪತಿಯ ಪುತ್ರನಾದ ಮೃತರು ಪತ್ನಿ ಮಿನಿ, ಮಕ್ಕಳಾದ ಆನ್ಸಲಿನ್, ಆಲ್ಫಿಲ್, ಆಲ್ಫೋನ್ಸ್, ಸಹೋದರಿ ಸಿಲ್ವಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
