ಪೆಟ್ರೋಲ್ ಸುರಿದು ಕಿಚ್ಚಿರಿಸಿ ಆತ್ಮಾಹುತಿ ಗೈಯ್ಯಲೆತ್ನಿಸಿದ ಯುವಕ ಸಾವು

ಕಾಸರಗೋಡು: ದೇಹದ ಮೇಲೆ ಪೆಟ್ರೋಲ್ ಸುರಿದು ಸ್ವಯಂ ಕಿಚ್ಚಿರಿಸಿ ಆತ್ಮಾಹುತಿಗೆತ್ನಿಸಿದ ಗಂಭೀರ ಸುಟ್ಟ ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಮೂಲತಃ ಪಯ್ಯನ್ನೂರು ಪುಂಚಕ್ಕಾಡು ನಿವಾಸಿ ಹಾಗೂ ಈಗ ತೃಕ್ಕರಿಪುರ ನಡಕ್ಕಾವು ಕೊವ್ವಲ್ ಮುಂಡಕೈ ಬಳಿ ವಾಸಿಸುತ್ತಿರುವ ಎ. ಸುಜಿತ್ (42) ಸಾವನ್ನಪ್ಪಿದ ಯುವಕ.

ಈತ ನಿನ್ನೆ ಬೆಳಿಗ್ಗೆ ತನ್ನ ಮನೆ ಪಕ್ಕದಲ್ಲಿ ದೇಹದ ಮೇಲೆ ಪೆಟ್ರೋಲ್ ಸುರಿದು ಕಿಚ್ಚಿರಿಸಿ ಗಂಭೀರ ಸುಟ್ಟ ಗಾಯಗೊಂಡಿದ್ದನು. ತಕ್ಷಣ ಆತನನ್ನು ಕಣ್ಣೂರು ವೈದ್ಯಕೀಯ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ, ಪ್ರಾಣ ಉಳಿಸಲು ಸಾಧ್ಯವಾಗಿರಲಿಲ್ಲ. ಮೃತರು ಪತ್ನಿ ಸಿ. ಸುನಿತ (ನೌಕಾಪಡೆ ಸಿಬ್ಬಂದಿ), ಮಕ್ಕಳಾದ ಅಮರ್‌ಜಿತ್, ಅಭಿಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕೌಟುಂಬಿಕ ಸಮಸ್ಯೆಯೇ ಇವರ ಆತ್ಮಾಹುತಿಗೆ ಕಾರಣವೆನ್ನಲಾಗಿದೆ.

You cannot copy contents of this page