ಭಾರತೀಯ ಕಿಸಾನ್ ಸಂಘ ಸಮಾವೇಶ

ಮೀಯಪದವು: ಭಾರತೀಯ ಕಿಸಾನ್ ಸಂಘದ ಸಮಾವೇಶ ಕಾಸರ ಗೋಡು ಟೌನ್ ಬ್ಯಾಂಕ್ ಹಾಲ್‌ನಲ್ಲಿ ಜರಗಿತು. ಕುಂಞ ರಾಮನ್‌ನಾಯರ್ ಅಧ್ಯಕ್ಷತೆ ವಹಿಸಿ ಕೃಷಿಕರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಮಾಜಿ ಸಂಘಟನಾ ಕಾರ್ಯದರ್ಶಿ ರಮೇಶ್ ಸದಸ್ಯತನದ ಬಗ್ಗೆ ತಿಳಿಸಿದರು. ಸೆಪ್ಟಂಬರ್ 4ರಂದು ಕಾಸರಗೋಡಿನಲ್ಲಿ ಜಿಲ್ಲಾ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. ಕೇಂದ್ರ ಸರಕಾರದ ಹಲವಾರು ಜನಪರ ಯೋಜನೆಗಳನ್ನು ರಾಜ್ಯ ಸರಕಾರ ಕಡೆಗಣಿಸಿ ಅದರ ಸವಲತ್ತುಗಳನ್ನು ಜನರಿಗೆ ಗಳಿಸಿ ಕೊಡುವಲ್ಲಿ ವಿಫಲವಾಗಿದೆ. 60ವರ್ಷ ಮೇಲ್ಪಟ್ಟ ಕೃಷಿಕರಿಗೆ ಕಿಸಾನ್ ಸಮ್ಮಾನ್ ಯೋಜನೆ ಆಯುಷ್ಮಾನ್ ಭಾರತ್ ಹಾಗೂ ಇತರ ಆರೋಗ್ಯದ ಬಗ್ಗೆ ಸಿಗುವ ಸೌಲಭ್ಯಗಳು, ಮುದ್ರಾ ಯೋಜನೆ, ಇತರ ಕೈಗಾರಿಕಾ ಸೌಲಭ್ಯಗಳು, ಸ್ವಉದ್ಯೋಗ ಸೌಕರ್ಯಗಳು, ವೃದ್ಧಾಪ್ಯ ವೇತನ, ವಿಧವೆಯರ ಇತರ ಸೌಲಭ್ಯಗಳು ಜನರಿಗೆ ಸಿಗಲು ಭಾ.ಕಿ.ಸಂನ ಸದಸ್ಯರು ಶ್ರಮ ವಹಿಸಬೇಕೆಂದು ಅವರು ನುಡಿದರು. ರಾಮ ಮಾಸ್ಟರ್, ಸುರೇಶ್ ಹೊಳ್ಳ, ವೇಣುಗೋಪಾಲ್ ಶೆಟ್ಟಿ, ಜಗನ್ನಾಥ ಮಾಸ್ಟರ್ ಮÁತನಾಡಿದರು. ಸದಾನಂದ ಕೊಮ್ಮಡ ಸ್ವಾಗತಿಸಿ, ಭೋಜ ಮಾಸ್ಟರ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page