ವಿಷಾಹಾರ ಸೇವನೆ : ಒಂದೇ ಕುಟುಂಬದ ನಾಲ್ವರು ಮೃತ್ಯು

ರಾಯಚೂರು: ಸೇವಿಸಿದ ಆಹಾರದಲ್ಲಿ ವಿಷಾಂಶ ಸೇರಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ಘಟನೆ  ಕರ್ನಾಟಕದ ರಾಯಚೂರಿನಲ್ಲಿ ಸಂಭವಿಸಿದೆ.  ಓರ್ವ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿರುವುದಾಗಿ ತಿಳಿದುಬಂದಿದೆ. ರಾಯಚೂರು ಜಿಲ್ಲೆಯ ಕಲ್ಲೂರು ಗ್ರಾಮದಲ್ಲಿ   ಘಟನೆ ನಡೆದಿದೆ. ಇಲ್ಲಿನ ಭೀಮಣ್ಣ  (60), ಪತ್ನಿ ಏರಮ್ಮ (57), ಪುತ್ರ ಮಲ್ಲೇಶ್ (21), ಪುತ್ರಿ ಪಾರ್ವತಿ (19) ಎಂಬಿವರು ಮೃತಪಟ್ಟವ ರೆಂದು ತಿಳಿದುಬಂದಿದೆ. ಇವರ ಇನ್ನೋರ್ವೆ ಪುತ್ರಿ ಮಲ್ಲಮ್ಮ (23) ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಎರಡು ದಿನಗಳ ಹಿಂದೆ ಇವರು ಚಪಾತಿ ಹಾಗೂ ತರಕಾರಿ ಪದಾರ್ಥ ಸೇವಿಸಿದ್ದರೆಂದು ಹೇಳಲಾಗುತ್ತಿದೆ.  ಅನಂತರ ಅವರಿಗೆ ಅಸೌಖ್ಯ ಕಾಣಿಸಿಕೊಂಡಿತ್ತು. ಇದರಿಂದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ನಾಲ್ಕು ಮಂದಿಯ  ಜೀವ ರಕ್ಷಿಸಲಾಗಲಿಲ್ಲವೆಂದು ಹೇಳಲಾಗುತ್ತಿದೆ. ಇದೇ ವೇಳೆ ಇವರು ಸೇವಿಸಿದ  ಆಹಾರದಲ್ಲಿ ವಿಷಾಂಶ ಬೆರೆತಿರುವುದಾಗಿ ತಿಳಿದುಬಂದಿದೆ. ರಕ್ತದಲ್ಲಿ ಕೀಟನಾಶಕದ ಅಂಶ ಪತ್ತೆಯಾಗಿರುವುದಾಗಿ ಡೆಪ್ಯುಟಿ ಕಮಿಶನರ್ ತಿಳಿಸಿದ್ದಾರೆ.

RELATED NEWS

You cannot copy contents of this page