ಮರದ ಮಿಲ್‌ನಿಂದ 2.85 ಲಕ್ಷ ರೂ. ಕಳವು
ಕಾಸರಗೋಡು: ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಕಳವಿಗೆ ಯತ್ನಿಸಿದ ಅದೇ ದಿನದಂದು ಚೆಂಗಳ ನಾಲ್ಕನೇ ಮೈಲಿನ ಮರದ ಮಿಲ್‌ನಲ್ಲಿ ಕಳವು ನಡೆದಿದೆ.ಚೆಂಗಳ ನಾಲ್ಕನೇ ಮೈಲುಗಲ್ಲಿನಲ್ಲಿರುವ ಅಬ್ದುಲ್ ಹಮೀದ್ ಎಂಬವರ ‘ನ್ಯೂ ವೆಸ್ಟರ್ನ್ ಸೋ ಮಿಲ್’ನಲ್ಲಿ ಈ ಕಳವು ನಡೆದಿದೆ. ಇದರ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಕಚೇರಿ ಕೊಠಡಿಯ ಡ್ರವರ್‌ನೊಳಗೆ ಇರಿಸಲಾಗಿದ್ದ 2,85, ರೂ. ನಗದು ಕಳವು ಗೈದಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವಿದ್ಯಾನಗರದ ಜಿಲ್ಲಾ ನ್ಯಾಯಾಲಯದಲ್ಲಿ ಕಳವಿಗೆ ಯತ್ನಿಸಿದ ಶನಿವಾರದಂದು ರಾತ್ರಿಯೇ ಈ ಮಿಲ್‌ನಲ್ಲಿ ಕಳವು ನಡೆದಿದೆ. ಆದ್ದರಿಂದ ನ್ಯಾಯಾಲಯದಲ್ಲಿ ಕಳವಿಗೆ ಯತ್ನಿಸಿದ ವ್ಯಕ್ತಿಯೇ ಮಿಲ್‌ನಲ್ಲೂ ಕಳವು ನಡೆಸಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಜಿಲ್ಲಾ ನ್ಯಾಯಾಲಯದಲ್ಲಿ ಕಳವಿಗೆ ಯತ್ನಿಸಿದ ವ್ಯಕ್ತಿಯ ಚಿತ್ರ ಅಲ್ಲಿನ ಸಿಸಿ ಟಿವಿ ಕ್ಯಾಮರಾದಲ್ಲಿ ಮೂಡಿ ಬಂದಿದ್ದು, ಅದರ ಜಾಡು ಹಿಡಿದು ಆತನ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.