ಸ್ನಾನಕ್ಕೆಂದು ಕೊಠಡಿಗೆ ತೆರಳಿದ ಹತ್ತನೇ ತರಗತಿ ವಿದ್ಯಾರ್ಥಿನಿ ನಾಪತ್ತೆ : ತನಿಖೆ ಆರಂಭ

ಕಾಸರಗೋಡು:  ಸಂಬಂಧಿಕರು ವಾಸಿಸುವ ಕ್ವಾರ್ಟರ್ಸ್‌ಗೆ ತಲುಪಿದ 10ನೇ ತರಗತಿ ವಿದ್ಯಾರ್ಥಿನಿ ನಿಗೂಢವಾಗಿ ನಾಪತ್ತೆಯಾದ ಬಗ್ಗೆ ತಿಳಿದು ಬಂದಿದೆ. ಕಾಸರಗೋಡು ನಗರ ಠಾಣೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ವಿದ್ಯಾಲಯವೊಂದರ 10ನೇ ತರಗತಿ ವಿದ್ಯಾರ್ಥಿನಿ ಯಾದ 16ರ ಹರೆಯದ ಬಾಲಕಿ ನಾಪತ್ತೆಯಾಗಿರುವುದು. ಹಾಸ್ಟೆಲ್‌ನಲ್ಲಿ ವಾಸಿಸಿ ಈಕೆ ಶಾಲೆಗೆ ತೆರಳುತ್ತಿದ್ದಳು. ಬೋವಿಕ್ಕಾನದ ಕ್ವಾರ್ಟರ್ಸ್‌ವೊಂ ದರಲ್ಲಿ ವಾಸಿಸುವ ಮಾವ ಹಾಗೂ ಅತ್ತೆ ಈ ಬಾಲ ಕಿಯ ಸ್ಥಳೀಯ ರಕ್ಷಕರಾಗಿದ್ದಾರೆ. ಆದುದರಿಂದ ಈ ಬಾಲಕಿಯನ್ನು ಆಗಾಗ ಕ್ವಾರ್ಟ ರ್ಸ್‌ಗೆ ಕರೆದುಕೊಂಡು ಹೋಗುತ್ತಿ ದ್ದರು. ಬುಧವಾರ ಸಂಜೆ ಕೊನೆಯದಾಗಿ ಕ್ವಾರ್ಟರ್ಸ್‌ಗೆ ಬಾಲಕಿಯನ್ನು ಕರೆತಂದಿದ್ದರು. ರಾತ್ರಿ 8.30ರ ವೇಳೆ ಕ್ವಾರ್ಟರ್ಸ್‌ನ ಸ್ನಾನದ ಕೊಠಡಿಗೆ ಬಾಲಕಿ ತೆರಳಿದ್ದಳು. ಬಹಳ ಹೊತ್ತು ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಅತ್ತೆ ನೋಡಿದಾಗ ಬಾಲಕಿ ಅದರೊಳಗೆ ಇರಲಿಲ್ಲ. ಸ್ನಾನದ ಕೊಠಡಿ ಯ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿತ್ತು. ಈ ಬಗ್ಗೆ ಆದೂರು ಪೊಲೀಸರಿಗೆ ಅತ್ತೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆಗೆ ಚಾಲನೆ ನೀಡಿ ದ್ದಾರೆ. ಬಾಲಕಿಯ ಮೊಬೈಲ್ ಫೋನ್ ಕ್ವಾರ್ಟರ್ಸ್‌ನಲ್ಲೇ ಇದೆ ಎನ್ನಲಾಗಿದೆ.

RELATED NEWS

You cannot copy contents of this page