ಎಲ್ಲೆಡೆ ಸಂಭ್ರಮದ ನಾಗರಪಂಚಮಿ ಆಚರಣೆ
ಕಾಸರಗೋಡು: ನಾಡಿನ ಎಲ್ಲೆಡೆ ಇಂದು ಭಕ್ತಿ, ಸಂಭ್ರಮದಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ದೇವಾಲಯ, ನಾಗರಕಟ್ಟೆಗಳಲ್ಲಿ ನಾಗನಿಗೆ ಸೀಯಾಳಾಭಿಷೇಕ, ಕ್ಷೀರಾಭಿಷೇಕ, ತಂಬಿಲ ಮೊದಲಾದವುಗಳನ್ನು ನಡೆಸಿ ಭಕ್ತರು ಪುನೀತರಾದರು. ಸಂಪಿಗೆ, ಕೇದಿಗೆ, ಜಾಜಿ, ಸೇವಂತಿಗೆ ಮೊದಲಾದ ಹೂವುಗಳಿಂದ ನಾಗನನ್ನು ಅಲಂಕರಿಸಲಾಯಿತು. ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಕೆಎಸ್ಆರ್ಟಿಸಿಯ ನಾಗರಕಟ್ಟೆ, ಅಶೋಕನಗರ ನಾಗರ ಕಟ್ಟೆ, ಕೂಡ್ಲು ಶೇಷವನ, ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕಂಠಪ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಗುಡ್ಡೆ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ಹೀಗೆ ನಾಡಿನ ಅನೇಕ ದೇವಾಲಯಗಳಲ್ಲಿ ನಾಗರಪಂಚಮಿಯನ್ನು ಸಡಗರದಿಂದ ಆಚರಿಸಲಾಗುತ್ತಿದೆ.