ಉಪ್ಪಳದಲ್ಲಿ ವಿದ್ಯಾರ್ಥಿಗಳಿಗೆ ರ್ಯಾಗಿಂಗ್: 12 ಮಂದಿ ವಿರುದ್ಧ ಕೇಸು
ಉಪ್ಪಳ: ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ವನ್ ವಿದ್ಯಾರ್ಥಿಗಳ ಮೇಲೆ ರ್ಯಾಗಿಂಗ್ ನಡೆಸಿದ ಆರೋಪದಂತೆ ಪ್ಲಸ್ಟುವಿನ 12 ಮಂದಿ ವಿದ್ಯಾರ್ಥಿ ಗಳ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಈ ತಿಂಗಳ ೭ರಂದು ಸಂಜೆ ೫ ಗಂಟೆಗೆ ಪ್ಲಸ್ವನ್ ವಿದ್ಯಾರ್ಥಿಗಳಾದ ಮೂವರಿಗೆ ಹಲ್ಲೆಗೈದು ರ್ಯಾಗಿಂಗ್ ನಡೆಸಿದ ಆರೋಪದಂತೆ ಈ ಕೇಸುದಾಖಲಿ ಸಲಾಗಿದೆ. ಕಿರಿಯ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಕುರಿತಾಗಿ ಪ್ರಾಂ ಶುಪಾಲ ವಿಪಿನ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.