ಆಟೋ ಪಾರ್ಕ್ ವಿಷಯದಲ್ಲಿ ಚಾಲಕನ ಮೇಲೆ ಹಲ್ಲೆ: ಮೂವರ ವಿರುದ್ಧ ಕೇಸು
ಕಾಸರಗೋಡು: ಕಾಸ ರಗೋಡು ರೈಲು ನಿಲ್ದಾಣ ಬಳಿಯ ಆಟೋ ಪಾರ್ಕಿಂಗ್ ಸ್ಥಳದಲ್ಲಿ ಆಟೋ ರಿಕ್ಷಾ ಚಾಲಕ ಮೇಲ್ಪರಂಬ ಬೈತುಲ್ ನೂರ್ ನಿವಾಸಿ ಅಬ್ದುಲ್ ಸಮದ್ ಪಿ.ಎ (53)ರ ಮೇಲೆ ಹಲ್ಲೆ ನಡೆಸಿದ ದೂರಿನಂತೆ ಮೂವರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬದರುದ್ದೀನ್, ಸುಕು ಮಾರನ್ ಮತ್ತು ಇನ್ನೋರ್ವ ಸೇರಿದಂತೆ ಮೂರು ಮಂದಿ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ರೈಲು ನಿಲ್ದಾಣದ ಆಟೋ ರಿಕ್ಷಾ ಸ್ಟಾಂಡ್ನಲ್ಲಿ ಆಟೋ ರಿಕ್ಷಾ ಪಾರ್ಕ್ ಮಾಡುವ ವಿಷಯದಲ್ಲಿ ಆರೋಪಿಗಳು ನಿನ್ನೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಬ್ದುಲ್ ಸಮದ್ ಆರೋಪಿಸಿದ್ದಾರೆ.