ಒಂದು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡ ಆರೋಪಿ ಮತ್ತೆ ಕಳವು ಪ್ರಕರಣದಲ್ಲಿ ಸೆರೆ
ಮಂಜೇಶ್ವರ: ಕ್ಷೇತ್ರಕಳವು ಪ್ರಕರಣದಲ್ಲಿ ೮ ತಿಂಗಳ ಕಾಲ ಜೈಲಿನಲ್ಲಿದ್ದು ಒಂದು ತಿಂಗಳ ಹಿಂದೆ ಯಷ್ಟೇ ಬಿಡುಗಡೆಗೊಂಡ ಯುವಕ ಬೇಕರಿ ಕಳವು ಪ್ರಕರಣದಲ್ಲಿ ಸೆರೆಗೀಡಾಗಿದ್ದಾನೆ. ಮಂಜೇಶ್ವರ ಬಳಿಯ ದುರ್ಗಿಪಳ್ಳ ನಿವಾಸಿ ಲಕ್ಷ್ಮೀಶ (೪೦) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಹೊಸಂಗಡಿ ಪೇಟೆಯಲ್ಲಿರುವ ಅಯ್ಯಂಗಾರ್ ಬೇಕರಿಗೆ ನುಗ್ಗಿ ೧೦ ಸಾವಿರ ರೂಪಾಯಿ ಕಳವುಗೈದ ಪ್ರಕರಣದಲ್ಲಿ ಇದೀಗ ಈತನನ್ನು ಬಂಧಿಸಲಾಗಿದೆ.
ಈ ತಿಂಗಳ ೨ರಂದು ರಾತ್ರಿ ಬೇಕರಿಯ ಶಟರ್‌ನ ಬೀಗ ಮುರಿದು ಒಳನುಗ್ಗಿದ ಆರೋಪಿ ಮೇಜಿನಲ್ಲಿರಿಸಿದ್ದ ೧೦ ಸಾವಿರ ರೂಪಾಯಿ ಕಳವುಗೈದಿ ದ್ದನು. ಬೇಕರಿಯೊಳಗಿನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಯ ಮಾಹಿತಿ ಲಭಿಸಿತ್ತು. ಬಳಿಕ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಒಂದು ವರ್ಷ ಹಿಂದೆ ಹೊಸಂಗಡಿಯ ಶ್ರೀ ಅಯ್ಯಪ್ಪ ಕ್ಷೇತ್ರದಿಂದ ಕಳವು ನಡೆಸಿದ ಪ್ರಕರಣದಲ್ಲೂ ಲಕ್ಷ್ಮೀಶ ಆರೋಪಿಯಾಗಿದ್ದನು. ಈ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ಗೊಳಗಾದ ಆರೋಪಿ ಒಂದು ತಿಂಗಳ ಹಿಂದೆ ಬಿಡುಗಡೆಗೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.