ಬಾಂಗ್ಲದಲ್ಲಿ ಹಿಂದೂಗಳ ಹತ್ಯೆ ವಿರುದ್ಧ ಸಂಘ ಪರಿವಾರದಿಂದ ಉಪ್ಪಳದಲ್ಲಿ ಪ್ರತಿಭಟನೆ

ಉಪ್ಪಳ: ಬಾಂಗ್ಲದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿರುವುದನ್ನು ಪ್ರತಿಭಟಿಸಿ  ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃ ಶಕ್ತಿ ದುರ್ಗಾವಾಹಿನಿ ಮಂಜೇಶ್ವರ ಪ್ರಖಂಡ ಆಶ್ರಯದಲ್ಲಿ ಉಪ್ಪಳ ಪೇಟೆಯಲ್ಲಿ ಬೃಹತ್ ಮೆರವಣಿಗೆ ನಿನ್ನೆ ಸಂಜೆ ನಡೆಸಲಾಯಿತು. ಬಜರಂಗ ದಳ ಪುತ್ತೂರು ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ವಿಕಾಸ್ ಪುತ್ತೂರು ಮಾತನಾ ಡಿದರು.

ಮುಖಂಡರಾದ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಯಾದವ ಕೀರ್ತೇಶ್ವರ, ಸತ್ಯ ವೀರನಗರ, ರಂಜಿತ್‌ಬಾಬ, ಜಯ ಶರ್ಮಿಳ, ಪದ್ಮ ಮೋಹನ್‌ದಾಸ್, ವಸಂತಕುಮಾರ್ ಮಯ್ಯ, ಹರಿನಾಥ ಭಂಡಾರಿ ಮುಳಿಂಜ ಉಪಸ್ಥಿತರಿದ್ದರು.

You cannot copy contents of this page