ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾದ ಮೂವರ ಸೆರೆ
ಕುಂಬಳೆ: ಮುಂಜಾನೆ ಹೊತ್ತಿನಲ್ಲಿ ಪೇಟೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಮೂವರು ಯುವಕರನ್ನು ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೆರಿಯಡ್ಕ ನಿವಾಸಿ ಅನ್ಸಾರ್ (26), ಮಧೂರು ಕೆ.ಕೆ ಪುರದ ಉಸ್ಮಾನ್ (40), ಉಳಿಯತ್ತಡ್ಕ ನೇಶನಲ್ ನಗರದ ಅಶ್ರಫ್(38) ಎಂಬಿವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ಮೂವರು ಇಂದು ಮುಂಜಾನೆ ಕುಂಬಳೆ ಸಿಎಚ್ಸಿ ರಸ್ತೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ವೇಳೆ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತರ ಪೈಕಿ ಅನ್ಸಾರ್ ನರಹತ್ಯಾ ಯತ್ನ, ಖಾಸಗಿ ಹಣಕಾಸು ಸಂಸ್ಥೆಯಲ್ಲಿ ನಕಲಿ ಚಿನ್ನ ಅಡವಿರಿಸಿ ವಂಚನೆ ನಡೆಸಿದ ಪ್ರಕರಣದಲ್ಲಿ ಈ ಹಿಂದೆ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.