ಡಿವೈಎಸ್‌ಪಿ ಸೇರಿದಂತೆ ಜಿಲ್ಲೆಯ 10 ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ

ಕಾಸರಗೋಡು:  ಸ್ವಾತಂತ್ರ್ಯೋತ್ಸವದ ಅಂಗವಾಗಿ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ ಪೊಲೀಸರಿಗೆ ರಾಜ್ಯ ಗೃಹಖಾತೆ ನೀಡುವ ಮುಖ್ಯಮಂತ್ರಿಯವರ  2024ನೇ ಸಾಲಿನ ಪದಕಕ್ಕೆ ಕಾಸರಗೋಡು ಜಿಲ್ಲೆಯ ಓರ್ವ ಡಿವೈಎಸ್‌ಪಿ ಸೇರಿದಂತೆ ಹತ್ತು ಮಂದಿ ಪೊಲೀಸರು ಆಯ್ಕೆಯಾಗಿದ್ದಾರೆ.ರಾಜ್ಯ ಪೊಲೀಸ್ ಸ್ಪೆಷಲ್ ಬ್ರಾಂಚ್‌ನ ಕಣ್ಣೂರು ರೂರಲ್ ಡಿವೈಎಸ್‌ಪಿ ಸತೀಶ್ ಕುಮಾರ್ ಆಲಕ್ಕಲ್, ಎಸ್‌ಐಗಳಾದ ಕೆ. ಲತೀಶ್, ಕೆ.ವಿ. ಜೋಸೆಫ್, ಎಎಸ್‌ಐಗಳಾದ ಎ.ಪಿ. ರಮೇಶ್ ಕುಮಾರ್, ಕೆ.ವಿ. ಗಂಗಾಧರನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಕೆ. ಬಿಂದು, ವಿ. ಸುಧೀರ್ ಬಾಬು, ದೀಪಕ್ ವೆಳುತ್ತುಟ್ಟಿ, ಕೆ. ರಜೀಶ್ ಮತ್ತು ಕೆ.ಎಂ. ಸುನಿಲ್ ಕುಮಾರ್‌ರನ್ನು  ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

You cannot copy contents of this page